9 ದಿನಗಳ ಕಾಲ ಅದು ಕಿವಿಯೊಳಗೆ ಇತ್ತು..!

ಮನೆಯಲ್ಲಿ ಯಾರಿಗೂ ಇಷ್ಟವಾಗದಂತಹ ಕ್ರಿಮಿ ಅಂದ್ರೆ ಜಿರಳೆ. ಕಣ್ಣಿಗೆ ಆ ಜಿರಳೆ ಬಿದ್ರೆ ಸಾಕು ಮೂಲೆನಲ್ಲಿ ಇರೋ ಪೊರಕೆ, ಚಪ್ಪಲಿ ತಗೊಂಡು ಆ ಜಿರಳೆನ ಸಾಯಿಸೋರೆ ಹೆಚ್ಚು. ಕೊನೆಗೆ ಅದು ನರಳಿ ನರಳಿ ಸತ್ತ ಮೇಲೆ ತಗೊಂಡು ಹೋಗಿ ಆಚೆ ಬಿಸಾಕ್ತೀವಿ. ಅದೇನಾದ್ರು ಹೆಣ್ಣು ಮಕ್ಕಳ ಕಣ್ಣಿಗೆ ಕಾಣಿಸ್ತೋ ಮುಗಿದೇ ಹೋಯ್ತು. ಓ ಮೈ ಗಾಡ್​! ಕಾಕ್ರೋಚ್​ ಅಂತ ಇಲ್ಲಿಂದ ಅಲ್ಲಿಗೆ ಎಗರಿ ಬೀಳ್ತಾರೆ. ಇನ್ನ ರಾತ್ರಿ ಹೊತ್ತು ಕಿವಿಗೋ, ಮೂಗಿಗೋ, ಹೋದ್ರೆ ಜೀವ ಕಳೆದುಕೊಂಡೇ ಹೋಗ್ತಾರೋ ಏನೋ?! ಆದ್ರೆ ಅದೇ ರೀತಿಯ ಒಂದು ಘಟನೆ ನಡೆದಿದೆ. ಮಹಿಳೆಯೊಬ್ಬಳು ರಾತ್ರಿ ಮಲಗಿದ್ದಾಗ ಜಿರಳೆ ಆಕೆಯ ಕಿವಿಯೊಳಗೆ ಹೋಗಿದೆ.
ಕಿವಿಯೊಳಗೆ ಹೋಗಿದ್ದು ವಾಪಸ್​ ಬಂದಿದ್ದು ಯಾವಾಗ..?
ಆಸ್ಟ್ರೇಲಿಯಾದ ಮೆಲ್ಬೋರ್ನ್​ನ ಫ್ಲೋರಿಡಾದ ಕಾಟಿ ಹೋಲೇ ಎಂಬ ಮಹಿಳೆ ತನ್ನ ಗಂಡನ ಜೊತೆ ಪುಟ್ಟ ಮನೆಯಲ್ಲಿ ವಾಸವಾಗಿದ್ಲು. ಈ ವೇಳೆ ರಾತ್ರಿ ಮಲಗಿದ್ದ ಸಮಯದಲ್ಲಿ ಕಾಟಿಯ ಕಿವಿಯೊಳಗೆ ಅದೇನೋ ಹೋದ ಹಾಗೆ ಫೀಲ್​ ಆಗಿದೆ. ಫೀಲಾದ ನಂತರ ಆಕೆ ಎದ್ದು ಸೀದಾ ಬಾತ್​ರೂಂಗೆ ಹೋಗಿ ಕಾಟನ್​ನ ತನ್ನ ಕಿವಿಯೊಳಗೆ ತುರುಕಿ ತೆಗೆಯಲು ಪ್ರಯತ್ನಿಸಿದ್ದಾಳೆ, ಈ ವೇಳೆ ಬ್ರೌನ್​ ಕಲರ್​ ಪೀಸಸ್​ ಆಚೆ ಬಂದಿದೆ. ಕಾಟಿಗೆ ಕಿವಿಯೊಳಗೆ ಅದೇನೋ ಓಡಾಡಿದ ಹಾಗೆ ಅನಿಸಿದೆ. ಆ ಬಳಿಕ ಕಿವಿ ಕೇಳದೆ ಸಮಸ್ಯೆ ಪ್ರಾರಂಭವಾಗಿದೆ. ಹೀಗಾಗಿ ಆಸ್ಪತ್ರೆಗೆ ತರಳಿದ್ದಾಳೆ. ವೈದ್ಯರು ಕೂಡ ಅದನ್ನ ಕಂಡು ಹಿಡಿಯೋಕೆ ಆಗದೆ 9 ದಿನ ಕಾಲ ತಳ್ಳಿದ್ದಾರೆ. 9 ದಿನಗಳ ನಂತರ ಜಿರಳೆ ಪುಡಿಪುಡಿಯಾಗಿ ಆಚೆ ಬಂದಿದೆ.

ವಿಶೇಷ ಬರಹ- ರಕ್ಷ ಪ್ರಸಾದ್‌

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv