‘ಲೋಕಸಭಾ ಚುನಾವಣೆಗೆ ನಿಲ್ಲಿ ಅಂದ್ರು, ನಾನೇ ಬೇಡಾ ಅಂತಾ ಹೇಳಿದೆ’

ಮೈಸೂರು: ಪ್ರತಿ ದಿನ ನಮ್ಮ‌ ಶಾಸಕರನ್ನ ಹಿಡಿದಿಟ್ಟುಕೊಳ್ಳೊದು ಸಹಾಸವಾಗಿದೆ. ನಾನು 80 ಜನ ಶಾಸಕರನ್ನ ಹಿಡಿದಿಟ್ಟುಕೊಳ್ಳದಿದ್ರೆ ಸರ್ಕಾರ ಏನಾಗುತ್ತಿತ್ತೋ ಅಂತಾ  ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಜಿಲ್ಲೆಯ ಇಲವಾಲದಲ್ಲಿ ಜಂಟಿ ಸಮಾವೇಶದಲ್ಲಿ ಮಾತನಾಡಿದ ಸಿದ್ದರಾಮಯ್ಯ, ನಾನು ಸಿಎಂ ಆಗಿ ಮಾಡಿದ ಕೆಲಸ ಹೊಳೆಯಲ್ಲಿ ಹುಣಸೆ ಹಣ್ಣು ತೊಯ್ದಂತೆ ಆಗಿಹೋಯ್ತು.  ನಾನು 5 ವರ್ಷ ಒಳ್ಳೆಯ ಯೋಜನೆಗಳನ್ನು ತಂದಿದ್ದೆ. ಮುಖ್ಯಮಂತ್ರಿಯಾಗಿ ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಸದಾನಂದಗೌಡ ಏನೂ ಕೆಲಸ ಮಾಡಲಿಲ್ಲ. ನಾನು ಅನ್ನಭಾಗ್ಯ, ಕ್ಷೀರಭಾಗ್ಯ, ಕ್ಷೀರಧಾರೆ, ಶಾದಿ ಭಾಗ್ಯ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೆ ತಂದೆ. ಆದ್ರೆ ಚಾಮುಂಡೇಶ್ವರಿ ಮಾತ್ರವಲ್ಲದೆ, ಇಡೀ ರಾಜ್ಯದಲ್ಲಿ ಪ್ರಯೋಜನ ಆಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ವಿಧಾನಸಭಾ ಚುನಾವಣೆಯಲ್ಲಿ  ಜನರು ನಮಗೆ 80 ಸೀಟ್, ಬಿಜೆಪಿಯವರಿಗೆ 104 ಸೀಟ್ ಕೊಟ್ಟರು. ಇವತ್ತು ಬಿಜೆಪಿ 104 ಸೀಟು ಗೆದ್ದು ಸರ್ಕಾರವನ್ನ ಅಸ್ಥಿರಗೊಳಿಸಲು ಸದಾ ಪ್ರಯತ್ನಿಸುತ್ತಿದೆ. ಚುನಾವಣೆಯ ಮೇಲೆ ನನಗೆ ಆಸಕ್ತಿ ಕಡಿಮೆ ಆಗಿದೆ. ನಾನು ಇನ್ನು ಮುಂದೆ ಎಲೆಕ್ಷನ್‌ಗೆ ನಿಲ್ಲಲ್ಲ ಇನ್ನೂ ಮುಖ್ಯಮಂತ್ರಿ ಆಗೋದು ಹೇಗೆ. ಸದ್ಯ ರಾಹುಲ್ ಗಾಂಧಿ ಪ್ರಧಾನಿ ಆದ್ರೆ ಸಾಕು ಅಂತ ಓಡಾಡುತ್ತಾ ಇದ್ದೀನಿ. ನಂಗೆ ಈ ಲೋಕಸಭಾ ಚುನಾವಣೆಯಲ್ಲಿ ನಿಲ್ಲಿ ಅಂತಾ ಕೆಲವರು  ಅಂದ್ರು,  ನಾನೆ ಬೇಡಾ ಅಂತಾ ಹೇಳಿದೆ. ನಂಗೆ ಚುನಾವಣೆ ಸಾಕಾಗಿ ಹೋಗಿದೆ. ನಾನು ಮುಂದೆ ಚುನಾವಣೆಗೆ ನಿಲ್ಲಲ್ಲ, ಆದ್ರೆ ಬಿಜೆಪಿ ವಿರುದ್ಧ ಹೋರಾಟ ಮಾಡೋದನ್ನಾ ನಿಲ್ಲಿಸಲ್ಲ ಅಂತಾ ಇದೇ ವೇಳೆ ಸಿದ್ದರಾಮಯ್ಯ ಹೇಳಿದರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv