ಬರ ನಿರ್ವಹಣೆಗಾಗಿ ಡಿಸಿ, ಇಇಓ ಜೊತೆ ಸಿಎಂ ವಿಡಿಯೋ ಕಾನ್ಫರೆನ್ಸ್​

ಬೆಂಗಳೂರು: ಬರ ಪರಿಸ್ಥಿತಿ ಎದುರಿಸುವ ಸಂಬಂಧ ಸಿಎಂ ಕುಮಾರಸ್ವಾಮಿ ಇಂದು ಅಧಿಕಾರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಿದ್ರು. ಬರ ಪರಿಸ್ಥಿತಿಯನ್ನ ಪರಿಣಾಮಕಾರಿಯಾಗಿ ನಿರ್ವಹಣೆ ‌ಮಾಡುವಂತೆ ಡಿಸಿ, ಸಿಇಓಗಳಿಗೆ ಖಡಕ್ ಸೂಚನೆ ನೀಡಿದ್ರು.

2,999 ಗ್ರಾಮಗಳಿಗೆ ಟ್ಯಾಂಕರ್ ಹಾಗೂ ಖಾಸಗಿ ಬೋರ್ ವೆಲ್ ಮೂಲಕ ನೀರು ಪೂರೈಕೆ ಮಾಡಿ, ನಗರ ಪ್ರದೇಶಗಳಲ್ಲಿ 440 ವಾರ್ಡ್ 271 ಟ್ಯಾಂಕರ್ ಗಳ ಮೂಲಕ ನೀರು ಪೂರೈಕೆ ಮಾಡುವಂತೆ ಸೂಚನೆ ನೀಡಿದರು.

ಜಿಲ್ಲಾ ಮತ್ತು ರಾಜ್ಯಮಟ್ಟದಲ್ಲಿ 1077 /1070 ಸಹಾಯ ವಾಣಿ ತೆರೆಯಲಾಗಿದೆ. ಪ್ರತಿ ಹೋಬಳಿಗೆ ಜಿಲ್ಲಾಮಟ್ಟದ ಅಧಿಕಾರಿಯನ್ನ ನೋಡಲ್ ಅಧಿಕಾರಿಯಾಗಿ ನೊಯೋಜನೆ ಮಾಡಲಾಗಿದೆ. ಕೂಡಲೇ ಜಿಲ್ಲಾಧಿಕಾರಿಗಳು ಹಾಗೂ ಸಿಇಓಗಳು ಜಿಲ್ಲೆಯಲ್ಲಿ ಬರಪೀಡಿತ ಪ್ರದೇಶಳಿಗೆ ಭೇಟಿ ನೀಡಿ ವರದಿ ನೀಡುವಂತೆ ಸೂಚನೆ ನೀಡಿದ್ರು.

ತಾವು ಬರ ಪ್ರವಾಸ ಕೈಗೊಂಡು ಸಲಹೆ ಕೊಡಬೇಕು. ಸಂಬಂಧಪಟ್ಟ ಅಧಿಕಾರಿಗಳಿಗೆ ಬರ ನಿರ್ವಹಣೆಗೆ ಸಲಹೆ ಕೊಡಿ. ಕುಡಿಯುವ ನೀರಿನ ಸರಬರಾಜು ಬಾಕಿ ಬಿಲ್ಲುಗಳ ಮೊತ್ತ 15 ದಿವಸದೊಳಗೆ ಪಾವತಿಸುವಂತೆ ಕ್ರಮ ಕೈಗೊಳ್ಳಿ. ಕುಡಿಯುವ ನೀರು ಪೂರೈಕೆ ಮಾಡುವ ಟ್ಯಾಂಕರ್​ಗೆ ಜಿಪಿಎಸ್ ಅಳವಡಿಕೆ ಮಾಡಿ. ಶುದ್ದ ಕುಡಿಯುವ ನೀರಿನ ಘಟಕ ಪ್ರತಿ ನಿತ್ಯ ಪರಿಶೀಲನೆ ಮಾಡಬೇಕು. ದುರಸ್ತಿ ಇದ್ದರೆ ತಕ್ಷಣ ಕ್ರಮ ಕೈಗೊಳ್ಳ ಬೇಕು. ಶುದ್ದ ನೀರಿನ ಘಟಕದಲ್ಲಿ ನೀರಿನ ಲಭ್ಯತೆ ಇಲ್ಲ ಅಂದರೆ ಟ್ಯಾಂಕರ್ ಮೂಲಕ ನೀರು ಪೂರೈಸಬೇಕು ಎಂದು ಸಲಹೆ ನೀಡಿದರು.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv