‘ಈಶ್ವರಪ್ಪನಿಗೆ ಸಂಸ್ಕೃತಿ ಇಲ್ಲಾ, ಸಂಸ್ಕೃತಿ ಹೀನ..’

ಚಾಮರಾಜನಗರ: ಉಡುಪಿಯ ಜನಸುರಕ್ಷಾ ಯಾತ್ರೆಯಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ನಾಲಿಗೆ ಹರಿಬಿಟ್ಟಿದ್ದ ಈಶ್ವರಪ್ಪಗೆ ಸಿಎಂ ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ. ಈಶ್ವರಪ್ಪನಿಗೆ ಸಂಸ್ಕೃತಿ ಇಲ್ಲ, ಈಶ್ವರಪ್ಪ ಸಂಸ್ಕೃತಿ ಹೀನ, ಎನ್ನುವ ಮೂಲಕ ಸಿಎಂ ವ್ಯಂಗ್ಯವಾಡಿದ್ರು.

ಚಾಮರಾಜನಗರ ಜಿಲ್ಲೆಯ ಹಾಲಳ್ಳಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಈಶ್ವರಪ್ಪಗೆ ಸಂಸ್ಕೃತಿ ಇಲ್ಲಾ, ಸಂಸ್ಕೃತಿ ಹೀನ, ಭಾಷೆ ಗೊತ್ತಿಲ್ಲದೆ ಏನೇನೋ ಬಾಯಿಗೆ ಬಂದಂತೆ ಮಾತಾಡ್ತಾರೆ ಎಂದು ಟಾಂಗ್ ನೀಡಿದರು.

ಆರ್‌ಎಸ್‌ಎಸ್‌ನವರೇ ಭಯೋತ್ಪಾದಕರು

ಇದೇ ವೇಳೆ ಸಂಸದ ನಳೀನ್ ಕುಮಾರ್ ಕಟೀಲ್ ಸಿಎಂ ಸಿದ್ದರಾಮಯ್ಯ ಭಯೋತ್ಪಾದಕರು ಎಂಬ ಹೇಳಿಕೆಗೆ ತಿರುಗೇಟು ನೀಡಿರುವ ಸಿದ್ದರಾಮಯ್ಯ, ನಾವು ಮನುಷ್ಯತ್ವ ಇರೋರು, ಆರ್‌ಎಸ್‌ಎಸ್‌ ಮತ್ತು ಬಜರಂಗದಳದವರೇ ಭಯೋತ್ಪಾದಕರ ರೀತಿ ಕೆಲಸ ಮಾಡುವವರು. ಅವರೇ ಭಯೋತ್ವಾದಕರು, ಅವರಿಗೆ ಮನುಷ್ಯರ ಪ್ರೀತಿಯ ಬೆಲೆ ಗೊತ್ತಿಲ್ಲಾ ಅಂತಾ ಸಿದ್ದರಾಮಯ್ಯ ಟಾಂಗ್ ನೀಡಿದ್ರು.

 

Leave a Reply

Your email address will not be published. Required fields are marked *