ಪಿಎಂ ಫಿಟ್​ನೆಸ್​ ಚಾಲೆಂಜ್​ಗೆ ಟ್ವಿಟರ್​ನಲ್ಲೇ ಧನ್ಯವಾದ ಹೇಳಿದ ಸಿಎಂ

ಬೆಂಗಳೂರು: ಈಗ ಫಿಟ್​ನೆಸ್​ ಚಾಲೆಂಜ್​ ಟ್ರೆಂಡ್​ ನಡೀತಿದೆ. ಪ್ರಧಾನಿ ನರೇಂದ್ರ ಮೋದಿ ತಮ್ಮ ಫಿಟ್​ನೆಸ್​ ವಿಡಿಯೋ ಅಪ್​ಲೋಡ್​ ಮಾಡಿದ್ದು, ಮುಖ್ಯಮಂತ್ರಿ ಕುಮಾರಸ್ವಾಮಿಗೆ ಫಿಟ್​ನೆಸ್​ ಚಾಲೆಂಜ್​ ಕೊಟ್ಟಿದ್ದಾರೆ.

ಇದಕ್ಕೆ ಟ್ವಿಟರ್​ನಲ್ಲಿ ಪ್ರತಿಕ್ರಿಯಿಸಿರುವ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಟ್ವಿಟರ್​ನಲ್ಲೇ ಪ್ರಧಾನಿ ಮೋದಿಗೆ ಧನ್ಯವಾದ ಹೇಳಿದ್ದಾರೆ. ನನ್ನ ಆರೋಗ್ಯದ ಬಗೆಗಿನ ನಿಮ್ಮ ಕಾಳಜಿಗೆ ನಾನು ಚಿರಋಣಿ. ದೈಹಿಕ ಫಿಟ್​ನೆಸ್​ ಅನ್ನೋದು ಎಲ್ಲರಿಗೂ ಮುಖ್ಯ. ಪ್ರತಿದಿನ ಯೋಗ ಮತ್ತು ಟ್ರೆಡ್​ಮಿಲ್​ನಲ್ಲಿ ವರ್ಕ್​ಔಟ್ ಮಾಡುತ್ತೇನೆ ಎಂದಿದ್ದಾರೆ. ಜೊತೆಯಲ್ಲೇ, ನನ್ನ ದೈಹಿಕ ಆರೋಗ್ಯಕ್ಕಿಂತ, ರಾಜ್ಯದ ಅಭಿವೃದ್ಧಿ ಮುಖ್ಯ. ರಾಜ್ಯದ ಅಭಿವೃದ್ಧಿಗೆ ನಿಮ್ಮ ಸಹಕಾರ ಇರಲೆಂದು ಕೋರುತ್ತೇನೆ ಎಂದು ಹೇಳಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv