ಬಿರುಗಾಳಿ ಲೆಕ್ಕಿಸದೇ ಸಿಎಂ ಸಿದ್ದರಾಮಯ್ಯ ಭಾಷಣ

ಬಳ್ಳಾರಿ: ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ರಘು ಗುಜ್ಜಲ್ ಪರ ಸಿಎಂ ಸಿದ್ದರಾಮಯ್ಯ ಭರ್ಜರಿ ಮತಪ್ರಚಾರ ಮಾಡಿದ್ರು. ಖಾನಾ ಹೊಸಹಳ್ಳಿಯ ಕಾಂಗ್ರೆಸ್ ಸಮಾವೇಶದಲ್ಲಿ ಜೋರಾಗಿ ಬೀಸ್ತಿರೋ ಗಾಳಿಯನ್ನು ಲೆಕ್ಕಿಸದೇ ಭಾಷಣ ಮಾಡಿದರು. ತಡವಾಗಿ ಬಂದ ಸಿಎಂ ಕಾರ್ಯಕ್ರಮದ ವೇದಿಕೆ ಮೇಲೆ ಬರುತ್ತಿದ್ದಂತೆ ಬಿರುಗಾಳಿ ಜೋರಾಯಿತು. ಇದರಿಂದ ಕೆಲ ಪೆಂಡಾಲ್​ ಹಾರಿ ಹೋದವು. ವೇದಿಕೆಗೆ ಧೂಳು ಆವರಿಸಿಕೊಂಡಿತು. ಸಿದ್ದರಾಮಯ್ಯ ಇದಾವುದನ್ನೂ ಲೆಕ್ಕಿಸದೇ ನೇರ ಭಾಷಣಕ್ಕೆ ಅಣಿಯಾದರು. ಎಲ್ಲಿ ಪೆಂಡಾಲ್​ಗಳು ಮೈ ಮೇಲೆ ಬೀಳುತ್ತಾವೆಂದು ಕಾರ್ಯಕರ್ತರು ಹಾಗೂ ಜನರು ಎದ್ದು ನಿಂತಿದ್ದರು.