ಹೊರಟ್ಟಿಗೆ ಶೀಘ್ರವೇ ಸಚಿವ ಸ್ಥಾನ: ಸಿಎಂ ರಾಜಕೀಯ ಕಾರ್ಯದರ್ಶಿ ಕೋನರೆಡ್ಡಿ

ಬಾಗಲಕೋಟೆ: ಈ ಹಿಂದೆ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ದಕ್ಕದೇ ಜೆಡಿಎಸ್​ ಹಿರಿಯ ನಾಯಕ ಬಸವರಾಜ್ ಹೊರಟ್ಟಿ ತೀವ್ರವಾಗಿ ಅಸಮಾಧಾನಗೊಂಡಿದ್ದರು. ಆದರೀಗ ಖುದ್ದು ಸಿಎಂ ರಾಜಕೀಯ ಕಾರ್ಯದರ್ಶಿ ಎನ್.ಹೆಚ್.ಕೋನರೆಡ್ಡಿ ಅವರೇ ಹೊರಟ್ಟಿಗೆ ಮಂತ್ರಿಯಾಗುವ ಭರವಸೆ ನೀಡಿದ್ದಾರೆ. ಬಸವರಾಜ್ ಹೊರಟ್ಟಿ ಅವ್ರಿಗೆ ಖಂಡಿತಾ ಸಚಿವ ಸ್ಥಾನ ಸಿಗುತ್ತೆ ಅಂತಾ ಅವ್ರು ಹೇಳಿದ್ದಾರೆ. ಬಾಗಲಕೋಟೆಯಲ್ಲಿ ಮಾತನಾಡಿರುವ ಎನ್‌.ಹೆಚ್ ಕೋನರೆಡ್ಡಿ, ಬಸವರಾಜ್ ಹೊರಟ್ಟಿ ಅವ್ರಿಗೆ ಸಚಿವ ಸ್ಥಾನ ಸಿಗಬೇಕು ಅಂತಾ ನನ್ನದೂ ಒತ್ತಾಯ ಇದೆ. ಅದ್ರಂತೆ ಹೊರಟ್ಟಿ ಅವ್ರಿಗೆ ಶೀಘ್ರ ಸಚಿವ ಸ್ಥಾನ ಸಿಗಲಿದೆ ಎಂದು ಕೋನರೆಡ್ಡಿ ಹೇಳಿದರು. ಈಗ್ಲಾದ್ರೂ ಹೊರಟ್ಟಿ ಸಚಿವರಾಗ್ತಾರಾ? ಕಾದು ನೋಡ್ಬೇಕು.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv