‘ಚುನಾವಣೆಯಲ್ಲಿ ಸೋತರೂ ಇಂಥ ಹುದ್ದೆ ನೀಡಿದ ದೇವೇಗೌಡರಿಗೆ ಆಭಾರಿ’

ಹುಬ್ಬಳ್ಳಿ: ಚುನಾವಣೆ ಸೋತ ನಂತರ ನನ್ನ ಆತ್ಮಬಲ ಕುಗ್ಗಿತ್ತು. ಚುನಾವಣೆಯಲ್ಲಿ ಸೋತರೂ ಇಂಥ ಹುದ್ದೆ ನೀಡಿದ ದೇವೇಗೌಡರಿಗೆ ಆಭಾರಿ ಎಂದು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎನ್.ಹೆಚ್ ಕೊನರೆಡ್ಡಿ ಭಾವುಕರಾದರು. ಸಿಎಂ ರಾಜಕೀಯ ಕಾರ್ಯದರ್ಶಿಯಾದ ಬಳಿಕ ಮೊದಲ ಬಾರಿಗೆ ನಗರಕ್ಕೆ ಆಗಮಿಸಿ, ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಆರು ತಿಂಗಳ ಹಿಂದೆಯೇ ನನಗೆ ಸಿಎಂ ರಾಜಕೀಯ ಕಾರ್ಯದರ್ಶಿಯಾಗಿ ನೇಮಕವಾಗಬೇಕಿತ್ತು. ಬದಲಾದ ರಾಜಕೀಯ ಸನ್ನಿವೇಶಗಳಿಂದ ಇದು ತಡವಾಗಿತ್ತು. ನಮ್ಮ ಪಕ್ಷದ ವರಿಷ್ಠರು ಉತ್ತರ ಕರ್ನಾಟಕಕ್ಕೆ ಉನ್ನತ ಸ್ಥಾನವನ್ನು ನೀಡಿದ್ದಾರೆ. ಈ ಹಿಂದೆ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಆಗಿ ಹಲವು ಹಿರಿಯ ನಾಯಕರು ಅಲಂಕರಿಸಿದ್ದಾರೆ. ಇದಕ್ಕೆ ನಾನು ಜೆಡಿಎಸ್ ವರಿಷ್ಠರಿಗೆ ಮುಖಂಡರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಎನ್.ಹೆಚ್‌. ಕೋನರೆಡ್ಡಿ ಭಾವುಕರಾದರು.

ಉತ್ತರ ಕನ್ನಡ ಅಭಿವೃದ್ಧಿ, ಪಕ್ಷ ಸಂಘಟನೆಯೇ ನನ್ನ ಗುರಿ. ಮಹಾದಾಯಿ, ಕಳಸಾ ಬಂಡೂರಿ ಜಾರಿ ವಿಚಾರ ನನ್ನ ಮುಂದಿರುವ ಬಹು ದೊಡ್ಡ ಸವಾಲು. ಇದನ್ನ ಬಗೆ ಹರಿಸಲು ಕೇಂದ್ರಕ್ಕೆ ಹಲವು ಬಾರಿ ಮನವಿ ಮಾಡಿದ್ದೇವೆ. ಲೋಕಸಭೆ ಚುನಾವಣೆ ಪೂರ್ವದಲ್ಲಿ ಈ ಬಗ್ಗೆ ಅಧಿಸೂಚನೆ ಹೊರಡಿಸಿದರೆ ರಾಜ್ಯದಿಂದಾಗ ಬೇಕಾದ ಕೆಲಸವನ್ನ ನಾನು ಮಾಡಿಸುತ್ತೇನೆ. ಮಹಾದಾಯಿ ಪ್ರಕರಣದಲ್ಲಿ ರೈತರ ಮೇಲಿನ ಕೇಸ್ ವಾಪಸ್ ಪಡೆಯವ ನಿರ್ಧಾರ ಮಾಡಿಯಾಗಿದೆ. ತಾಂತ್ರಿಕ ಕಾರಣದಿಂದ ಇನ್ನೂ ಕೆಲವು ಹಾಗೇ ಇವೆ ಎಂದು ಕೋನರೆಡ್ಡಿ ಹೇಳಿದರು.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv