ಜನತಾ ದರ್ಶನ: ವಿದ್ಯಾರ್ಥಿನಿಯ ಶಿಕ್ಷಣ ಖರ್ಚು ಭರಿಸಲು ಮುಂದಾದ ಸಿಎಂ

ಬೆಂಗಳೂರು: ಮುಖ್ಯಮಂತ್ರಿ ಜನತಾ ದರ್ಶನ ಕಾರ್ಯಕ್ರಮದ ವೇಳೆ ವಿದ್ಯಾರ್ಥಿನಿಯೊಬ್ಬಳ ಶಿಕ್ಷಣದ ಖರ್ಚನ್ನು ತಾವೇ ಭರಿಸೋದಾಗಿ ಹೆಚ್‌ಡಿಕೆ ಭರವಸೆ ನೀಡಿದ ಪ್ರಸಂಗ ನಡೆಯಿತು.
ಸರಿತಾ ಎಂಬ ವಿದ್ಯಾರ್ಥಿನಿ ಎಸ್‌ಎಸ್‌ಎಲ್‌ಸಿ ತೇರ್ಗಡೆಯಾಗಿ ಪರೀಕ್ಷೆ ಬರೆದು ಗ್ರಾಮ ಲೆಕ್ಕಾಧಿಕಾರಿಯಾಗಿ ಆಯ್ಕೆಯಾಗಿದ್ದಳು. ಆದರೆ ಆಕೆಗೆ ಇನ್ನೂ 18 ವರ್ಷ ತುಂಬದ ಕಾರಣ ಸಿಕ್ಕಿದ ಕೆಲಸ ಕೈ ತಪ್ಪಿತ್ತು. ಸರ್ಕಾರಿ ಪರೀಕ್ಷೆಯಲ್ಲಿ ತೇರ್ಗಡೆಯಾದರೂ ವಯಸಿೞನ ಕಾರಣದಿಂದ ಕೆಲಸ ಕೈತಪ್ಪಿದ್ದನ್ನು ವಿದ್ಯಾರ್ಥಿನಿ ಸರಿತಾ ಕುಮಾರಸ್ವಾಮಿ ಮುಂದೆ ತೋಡಿಕೊಂಡಳು. ತಕ್ಷಣ ರಾಮನಗರ ಡಿಸಿಗೆ ಫೋನಾಯಿಸಿದ ಸಿಎಂ ವಿಚಾರಿಸಿದ್ದಾರೆ. ಆದ್ರೆ 18 ವಯಸ್ಸು ತುಂಬದ ಕಾರಣ ಕಾನೂನಾತ್ಮಕ ಅಡೆ ತಡೆಗಳಿವೆ ಎಂದು ಸಿಎಂಗೆ ಡಿಸಿ ಮನವರಿಕೆ ಮಾಡಿಕೊಟ್ಟಿದ್ದಾರೆ. ಬಳಿಕ ವಿದ್ಯಾರ್ಥಿನಿಯ ಮನವೊಲಿಸಿದ ಸಿಎಂ, ಈ ವಯಸಿೞಗೆ ಕೆಲಸ ಬೇಡ, ವಿದ್ಯಾಬ್ಯಾಸ ಮುಂದುವರೆಸು ಅಂತಾ ತಿಳಿ ಹೇಳಿದ್ರು. ಆದ್ರೆ ಸರಿತಾ ಪೋಷಕರು ಬಡತನದ ಕಾರಣ ನಮ್ಮಿಂದ ಓದಿಸಲು ಸಾದ್ಯವಿಲ್ಲ ಅಂತ ಮುಖ್ಯಮಂತ್ರಿಗೆ ತಿಳಿಸಿದ್ರು. ಆಗ ಸಿಎಂ, ನಾನೇ ವಿದ್ಯಾಭ್ಯಾಸದ ಖರ್ಚು ಭರಿಸೋದಾಗಿ ಭರವಸೆ ನೀಡಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂಪರ್ಕಿಸಿ: contact@firstnews.tv