ಯುವ ದಸರಾ ಉದ್ಘಾಟನೆಗೆ ತಡವಾಗಿ ಬಂದರು ಸಿಎಂ, 2 ಗಂಟೆ ಕಾದರು ಸುಧಾಮೂರ್ತಿ

ಮೈಸೂರು: ಮೈಸೂರು ದಸರಾ ಉತ್ಸವದಲ್ಲಿ ಸಾಂಸ್ಕೃತಿ ಕಾರ್ಯಕ್ರಮದಲ್ಲಿ ಇಂದು ನಡೆಯುವ ಯುವ ದಸರಾ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಹೆಚ್​​.ಡಿ. ಕುಮಾರಸ್ವಾಮಿ ಮೈಸೂರಿಗೆ ಆಗಮಿಸಿದ್ದರು. ಆದರೆ, ಕಾರ್ಯಕ್ರಮದ ವೇದಿಕೆಗೆ ಆಗಮಿಸ ಹಿನ್ನೆಲೆಯಲ್ಲಿ ದಸರಾ ಉದ್ಘಾಟಕಿ ಇನ್ಫೋಸಿಸ್​​ ಫೌಂಡೇಶನ್​ನ ಮುಖ್ಯಸ್ಥೆ ಸುಧಾಮೂರ್ತಿ ಅವರು ಮುಖ್ಯಮಂತ್ರಿಗಳ ದಾರಿ ಕಾಯುವ ಪ್ರಸಂಗ ಎದುರಾಯಿತು.

ಸಂಜೆ 6 ಗಂಟೆಗೆ ಕುಮಾರಸ್ವಾಮಿ ಮೈಸೂರಿಗೆ ಆಗಮಿಸಿದ್ದರು. ಬಳಿಕ ತೆರದ ಬಸ್​ನಲ್ಲಿ ಮೈಸೂರು ನಗರ ವೀಕ್ಷಣೆ ಮಾಡಲು ತೆರಳಿದರು. ಈ ವೇಳೆ ಅಧಿಕಾರಿಗಳಿಂದ ಶಿಷ್ಟಾಚಾರ ಉಲ್ಲಂಘನೆಯಾಗಿದ್ದಕ್ಕೆ ಮುಖ್ಯಮಂತ್ರಿಗಳು ಗರಂ ಆದರು. ಆದರೆ, ಕಾರ್ಯಕ್ರಮ ನಿಗದಿಯಂತೆ ವೇದಿಕೆಗೆ ಆಗಮಿಸಿದ ದಸರಾ ಉದ್ಘಾಟಕಿ 2 ಗಂಟೆಯಿಂದ ವೇದಿಕೆ ಮುಂಭಾಗವೇ ಕಾಯಬೇಕಾಯಿತು. ಇನ್ನು, ಕಾರ್ಯಕ್ರಮಕ್ಕೆ ತಡವಾಗಿ ಆಗಮಿಸಿ ಕುಮಾರಸ್ವಾಮಿ ಯುವ ದಸರಾ ಕಾರ್ಯಕ್ರಮ ಉದ್ಘಾಟಿಸದೇ ನೇರವಾಗಿ ಕುರ್ಚಿ ಮೇಲೆ ಆಸೀನರಾದರು. ಈ ವೇಳೆ ಸಿಎಂ ಜೊತೆಗೆ ಹಂಗಾಮಿ ಸ್ವೀಕರ್ ಬಸವರಾಜ ಹೊರಟ್ಟಿ, ಸಚಿವರಾದ ಜಿ.ಟಿ. ದೇವೇಗೌಡ, ಸಾ.ರಾ.ಮಹೇಶ್ ಪುಟ್ಟರಾಜು ಆಗಮಿಸಿದರು.

 ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv