ಪಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಸಿಸಿಬಿ ಬಲೆಗೆ ಬಿದ್ದ ಗೋವಿಂದ ರಾಜು

ಬೆಂಗಳೂರು: ರಾಜ್ಯ ಸರ್ಕಾರಿ ಹುದ್ದೆಗಳ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಕುಮಾರಸ್ವಾಮಿ ಪಿಎ ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಸಿಎಂ ಗೃಹ ಕಚೇರಿಯಲ್ಲಿ ಕೆಲಸದಲ್ಲಿದ್ದ ಗೋವಿಂದ ರಾಜುನನ್ನು ಸಿಸಿಬಿ ಅಧಿಕಾರಿಗಳು ಮಾರ್ಚ್ 16ರಂದು ಬಂಧಿಸಿದ್ದರು. ನಿನ್ನೆ ಎಸಿಎಂಎಂ ನ್ಯಾಯಾಲಯದಿಂದ ಜಾಮೀನು ಪಡೆದು ಗೋವಿಂದ ರಾಜು ಹೊರಬಂದಿದ್ದಾನೆ.

ಪ್ರಶ್ನೆಪತ್ರಿಕೆ ಲೀಕ್​​ ಕೇಸ್​​ನಲ್ಲಿ ಗೋವಿಂದ ರಾಜು 33ನೇ ಅರೋಪಿ. ಬೆಂಗಳೂರಿನ ಪಟ್ಟೆಗಾರ ಪಾಳ್ಯದ ನಿವಾಸಿಯಾದ ಈತ ಸಿಎಂ ಕುಮಾರಸ್ವಾಮಿ ಪ್ರಮಾಣವಚನ ಸ್ವೀಕಾರ ದಿನದಿಂದಲೂ ಪಿಎ ಆಗಿದ್ದ. ಸಿಎಂ ಕಚೇರಿಯಲ್ಲಿದ್ದುಕೊಂಡು ಪ್ರಶ್ನೆ ಪತ್ರಿಕೆ ಲೀಕ್ ಟೀಂ ಜೊತೆ ನಿರಂತರ ಸಂಪರ್ಕದಲ್ಲಿದ್ದ ಎನ್ನಲಾಗಿದೆ. ಸರ್ಕಾರದ ಪಿಎಸ್ಐ, ಕಾನ್ಸಟೇಬಲ್, ಕಂಡಕ್ಟರ್ ಎಕ್ಸಾಂ ಪ್ರಶ್ನೆಪತ್ರಿಕೆ ಲೀಕ್ ನಲ್ಲಿ ಭಾಗಿಯಾಗಿರುವ ಅರೋಪ ಈತನ ಮೇಲಿದೆ. ಮೂರು ಪ್ರಶ್ನೆ ಪತ್ರಿಕೆ ಲೀಕ್ ಟೀಂನ ಕಿಂಗ್ ಪಿನ್ ಶಿವಕುಮಾರ್, ಬಸವರಾಜ್ ಹಾಗೂ ನಾಸೀರ್ ಅಹಮ್ಮದ್ ಜೊತೆ ನಿತಂತರ ಸಂಪರ್ಕದಲ್ಲಿದ್ದ ಎಂದು ಹೇಳಲಾಗಿದೆ. ಅರೋಪಿಗಳ ವಿಚಾರಣೆ ವೇಳೆ ಈ ಅಂಶಗಳು ಬಯಲಾಗಿದೆ. 20ಕ್ಕೂ ಹೆಚ್ಚು ಅಭ್ಯರ್ಥಿಗಳನ್ನ ಬುಕ್ ಮಾಡಿಕೊಂಡು ಹಣ ಪಡೆದಿದ್ದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ ಅಂತ ತಿಳಿದುಬಂದಿದೆ. ವಿಚಾರಣೆಯ ವೇಳೆ ಗೋವಿಂದರಾಜು, ಮೂರು ಕೇಸ್ ನಲ್ಲಿ ಭಾಗಿಯಾಗಿರುವುದಾಗಿ ಒಪ್ಪಿಕೊಂಡಿದ್ದಾನೆ.

ಇನ್ನು ಮಾರ್ಚ್​​ 16ರಂದು ಬಂಧನವಾಗಿ, 18ರಂದು ಗೋವಿಂದರಾಜುನನ್ನು ಸಿಸಿಬಿ ಕಷ್ಟಡಿಗೆ ಪಡೆದಿತ್ತು. ಬಳಿಕ ಕೋರ್ಟ್​ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಿತ್ತು. ಈ ಮಧ್ಯೆ ಮಾನ ಉಳಿಸಿಕೊಳ್ಳಲು ಮುಂದಾದ ಗೃಹ ಇಲಾಖೆ, ಸಿಸಿಬಿ ಅರೆಸ್ಟ್ ಆದ ನಂತರ ಗೋವಿಂದರಾಜುನನ್ನು ರೇಲ್ವೆ ಇಲಾಖೆಗೆ  ವರ್ಗಾವಣೆ ಮಾಡಿದೆ. ಅದರಲ್ಲೂ ಬಂಧನದ ಹಿಂದಿನ ದಿನದ ದಿನಾಂಕ ನಮೂದಿಸಿ ವರ್ಗಾವಣೆ ಮಾಡಿದ್ದು, ಸಿಎಂ ಕಚೇರಿ ಮಾನ ಉಳಿಸಿಕೊಳ್ಳಲು ಇಲಾಖೆ ವಿಚಿತ್ರ ಪ್ರಯತ್ನ ನಡೆಸಿರುವ ಶಂಕೆ ವ್ಯಕ್ತವಾಗಿದೆ. ಇನ್ನು ಗೋವಿಂದರಾಜು ಬಂಧನದ ಬಳಿಕ ರೇಲ್ವೆ ಇಲಾಖೆ ಆತನನ್ನು ಸಸ್ಪೆಂಡ್​ ಮಾಡಿದ್ದು, ಸದ್ಯ ಅಮಾನತಿನಲ್ಲಿದ್ದಾನೆ.

Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv