ಶೃಂಗೇರಿಯಲ್ಲಿ ನಾಳೆ ಸಿಎಂ ಕುಮಾರಸ್ವಾಮಿ ಪ್ರತ್ಯಂಗಿರಿ ಯಾಗ

ಚಿಕ್ಕಮಗಳೂರು: ಸಿಎಂ ಕುಮಾರಸ್ವಾಮಿಯವರು ಇಂದು ಶೃಂಗೇರಿ ಶಾರದೆ ದೇವಿಯ ದರ್ಶನ ಪಡೆದು ಪ್ರಾರ್ಥನೆ ಸಲ್ಲಿಸಿದರು. ಕುಮಾರಸ್ವಾಮಿ ಶಾರದಾ ತಾಯಿಯ ಬಳಿ ಆರೋಗ್ಯ ವೃದ್ಧಿ, ಶತ್ರು ನಾಶ ಕುರಿತು ಪ್ರತ್ಯಂಗಿರಿ ಯಾಗದ ಸಂಕಲ್ಪ ಮಾಡಿದ್ದಾರೆ.
ನಾಳೆಯ ಯಾಗದ ಪೂರ್ಣಾಹುತಿವರೆಗೂ ಕುಮಾರಸ್ವಾಮಿ ವ್ರತದಲ್ಲಿರುತ್ತಾರೆ. ದೇವಸ್ಥಾನದ ಆವರಣದಲ್ಲಿರುವ ಯಾಗ ಶಾಲೆ ಮಂಟಪದಲ್ಲಿ ನಾಳೆ ಯಾಗ ನಡೆಯುತ್ತದೆ. ನಾಳೆ ಬೆಳಗ್ಗೆ 5 ಗಂಟೆಯಿಂದ ನಡೆಯುವ ಯಾಗದ ಪೂರ್ಣಾಹುತಿ ನಡೆಯುತ್ತದೆ. 22 ದಿನಗಳ ಹಿಂದೆಯೇ ಸಹೋದರ ರೇವಣ್ಣ ಅವರು ಯಾಗಕ್ಕೆ ಚಾಲನೆ ನೀಡಿದ್ದರು. ಇಂದು ಸಹೋದರ ಹೆಚ್.ಡಿ ರೇವಣ್ಣ ಅನುಪಸ್ಥಿತಿಯಲ್ಲೇ ಕುಮಾರಸ್ವಾಮಿಯವರು ಪ್ರಾರ್ಥನೆ ಸಲ್ಲಿಸಿದರು. ಪ್ರತಿ ಬಾರಿ ಕುಮಾರಸ್ವಾಮಿ ಮತ್ತು ಸಹೋದರ ರೇವಣ್ಣ ಒಟ್ಟಿಗೆ ದೇವಸ್ಥಾನಕ್ಕೆ ಆಗಮಿಸುತ್ತಿದ್ದರು.

ಇಂದು ರಾತ್ರಿ ಸಿಎಂ ವಾಸ್ತವ:

ಜಿಲ್ಲೆಯ ಕೊಪ್ಪ ತಾಲೂಕಿನ ಗುಡ್ಡತೋಟ ಬಳಿಯ ಸಲವಾನೆ‌ ಎಸ್ಟೇಟ್​ನಲ್ಲಿರುವ ಜೆಡಿಎಸ್ ಮುಖಂಡ ರಂಗನಾಥ್ ಮನೆಯಲ್ಲಿ ಸಿಎಂ ಕುಮಾರಸ್ವಾಮಿ ವಾಸ್ತವ್ಯ ಹೊಡಲಿದ್ದಾರೆ. ಬೆಳಗ್ಗೆ ಅಲ್ಲಿಂದಲೇ ಯಾಗಕ್ಕೆ‌ ಆಗಮಿಸಲಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv