ಸಾಯಿ ರಾಧಾ ಹೆಲ್ತ್ ರೆಸಾರ್ಟ್​ನಲ್ಲಿ ಸಿಎಂ ಕುಮಾರಸ್ವಾಮಿ ರೆಸ್ಟ್​..!

ಉಡುಪಿ:  ಮುಖ್ಯಮಂತ್ರಿ ಕುಮಾರಸ್ವಾಮಿ ಇಂದು ಸಂಜೆ ಶಿವಮೊಗ್ಗದಲ್ಲಿ ಚುನಾವಣಾ ಪ್ರಚಾರ ಮುಗಿಸಿ, ಜಿಲ್ಲೆಯ ಕಾಪುವಿನ ಮೂಳೂರಲ್ಲಿರುವ, ಸಾಯಿರಾಧಾ ಹೆರಿಟೇಜ್​ ಹೆಲ್ತ್ ರೆಸಾರ್ಟ್​ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ನಾಳೆ ಮತ್ತು ನಾಡಿದ್ದು,  ಕುಮಾರಸ್ವಾಮಿ ಪಂಚಕರ್ಮ ಚಿಕಿತ್ಸೆ, ಧ್ಯಾನದಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ ಅವರು ಯೋಗ, ಆಯಿಲ್ ಥೆರಪಿ ಪಡೆದು ಎರಡು ದಿನ ಫುಲ್ ರಿಲ್ಯಾಕ್ಸ್ ಮಾಡಲಿದ್ದಾರೆ.

ಮರಳಿನಲ್ಲಿ ಸಿಕ್ಕಿಹಾಕಿಕೊಂಡ ಸಿಎಂ ಕಾರು..!
ಸಿಎಂ ಕುಮಾರಸ್ವಾಮಿ ಅವರಿದ್ದ ಕಾರು ಬೆಂಗಾವಲು ವಾಹನಗಳೊಂದಿಗೆ ಸಾಯಿರಾಧಾ ರೆಸಾರ್ಟ್​ಗೆ ಆಗಮಿಸುತ್ತಿದ್ದಂತೆ ಒಳಾವರಣದಲ್ಲಿ ಸಿಎಂ ಕಾರು ಮರಳಿನಲ್ಲಿ ಸಿಕ್ಕಿಹಾಕಿಕೊಂಡಿತು. ಮುಂದೆ ಚಲಿಸದಂತಾಯಿತು. ಕೊನೆಗೆ, ಟೀಶರ್ಟ್​​ ತೊಟ್ಟು ವಿಶ್ರಾಂತಿಯ ಮೂಡ್​​​ನಲ್ಲಿದ್ದ ಕುಮಾರಸ್ವಾಮಿ ಅವರು ಕಾರಿಂದ ಇಳಿದು ರೆಸಾರ್ಟ್​​​ನೊಳಕ್ಕೆ ಪ್ರವೇಶಿಸಿದರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv