ಟಿ.ನರಸೀಪುರದ ಸಂಗಮದಲ್ಲಿ ಸಿಎಂ ಕುಮಾರಸ್ವಾಮಿಯಿಂದ ಗಂಗಾರತಿ ಪೂಜೆ

ಮೈಸೂರು: ಇದೇ‌ ಮೊದಲ ಬಾರಿಗೆ ಟಿ.ನರಸೀಪುರದ ತ್ರಿವೇಣಿ ಸಂಗಮದಲ್ಲಿ ಗಂಗಾರತಿ ಪೂಜೆ ಆಯೋಜನೆ ಮಾಡಲಾಗಿದೆ. ಈ ಕುಂಭಮೇಳದ ಗಂಗಾರತಿ ನೋಡಿ ಸಂತೋಷವಾಯಿತು. ಉತ್ತರದಲ್ಲಿ ನಡೆಯುವ ಧಾರ್ಮಿಕ ಉತ್ಸವವನ್ನ, ದಕ್ಷಿಣ ಭಾರತದಲ್ಲೂ ದೊಡ್ಡ ಮಟ್ಟದಲ್ಲಿ ಆಯೋಜನೆ ಮಾಡಬೇಕೆಂಬುದು ನನ್ನ ಅಭಿಲಾಷೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

ಇದೇ ಮೊದಲ ಬಾರಿಗೆ  ಮೈಸೂರಿನ ತಿರುಮಕೂಡಲು ಟಿ.ನರಸೀಪುರದ ತ್ರಿವೇಣಿ ಸಂಗಮದಲ್ಲಿ ಆಯೋಜನೆ ಮಾಡಲಾದ ಕುಂಭಮೇಳದ ಗಂಗಾರತಿ‌ ಪೂಜೆಯಲ್ಲಿ ಸಿಎಂ‌ ಕುಮಾರಸ್ವಾಮಿ, ಸುತ್ತೂರು ದೇಶಿಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ ನಿರ್ಮಲಾನಂದ ಶ್ರೀ, ಸಚಿವರಾದ ಜಿ.ಟಿ ದೇವೆಗೌಡ, ಸಾ.ರಾ.ಮಹೇಶ್, ಸಿ.ಎಸ್.ಪುಟ್ಟರಾಜು ಶಾಸಕರಾದ ಯತೀಂದ್ರ ಅಶ್ವಿನ್ ಕುಮಾರ್, ಸಿಎಂ ಪತ್ನಿ ಅನಿತಾ ಕುಮಾರಸ್ವಾಮಿ ಭಾಗಿಯಾದ್ದರು. ಪೂಜೆ ಬಳಿಕ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು.

ಗಂಗಾರತಿ‌ ಪೂಜೆ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಕುಮಾರಸ್ವಾಮಿ, ಇಡೀ ದಕ್ಷಿಣ ಭಾರತದ ಜನರು ಇಲ್ಲಿನ ಕುಂಭಮೇಳವನ್ನು ನೋಡುವಂತಾಗಬೇಕು. ಪ್ರಕೃತಿ ಮಾತೆ ನಮ್ಮ ರಾಜ್ಯಕ್ಕೆ ಎಲ್ಲ ರೀತಿಯ ಒಳಿತು ಮಾಡಲಿ. ತಾಯಿ‌ ಕಾವೇರಿ ಸಮೃದ್ಧವಾಗಿ ಹರಿಯುವಂತಾಗಲಿ. ಕರ್ನಾಟಕ ಮತ್ತು ತಮಿಳುನಾಡು ನಡುವಿನ ನದಿ ನೀರು ಹಂಚಿಕೆ ವಿವಾದ ಇಲ್ಲದಂತಾಗಬೇಕು. ಕಳೆದ ಬಾರಿ ಉತ್ತಮ ಮಳೆಯಾಗಿತ್ತು. ಪರಿಣಾಮ ಒಂದು ಬೆಳೆ ಬೆಳೆಯುತ್ತಿದ್ದ ಜಾಗದಲ್ಲಿ ಎರೆಡರಡು ಬೆಳೆ ಸಿಕ್ಕಿದೆ. ಮುಂದೆಯು ನಾಡಿನಲ್ಲಿ ಉತ್ತಮ ಮಳೆ ಬೆಳೆಯಾಗಲಿ ಎಂದು ಪ್ರಾರ್ಥಿಸಿದ್ದೇ‌ನೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv