‘ಔರಾದ್ಕರ್ ವರದಿ ಜಾರಿಗೆ ಸಿದ್ಧನಿದ್ದೇನೆ! ಆದ್ರೆ ಅಧಿಕಾರಿಗಳೇ ಗೊಂದಲದಲ್ಲಿದ್ದಾರೆ’

ಮೈಸೂರು: ನಾನು ಸಮ್ಮಿಶ್ರ ಸರ್ಕಾರದಲ್ಲಿ ಆಡಳಿತ ಹೊಣೆ ಹೊತ್ತಿದ್ದೇನೆ. ಸೀಟು ಹಂಚಿಕೆ ಬಗ್ಗೆ ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಹಾಗೂ ರಾಜ್ಯಾಧ್ಯಕ್ಷರು ನೋಡಿಕೊಳ್ಳುತ್ತಾರೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. ಟಿ. ನರಸೀಪುರದ ಹೆಲಿಪ್ಯಾಡ್​​​​ನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಕುಮಾರಸ್ವಾಮಿ, ನಾನು ಆಡಳಿತ ನಡೆಸುವ ಬಗ್ಗೆ ಹೆಚ್ಚು ಗಮನ ಹರಿಸುತ್ತೇನೆ. ಸೀಟು ಹಂಚಿಕೆ ಬಗ್ಗೆ ಅವರು, ಕಾಂಗ್ರೆಸ್ ನಾಯಕರು ಮಾತನಾಡಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ.

ಇದೇ ವೇಳೆ ಪಾಕಿಸ್ತಾನ ಜಾಗತಿಕ ಉಗ್ರ ರಾಷ್ಟ್ರಘೋಷಣೆ ವಿಚಾರವಾಗಿ ಟಿ.ನರಸೀಪುರದ ಹೆಲಿಪ್ಯಾಡ್​​​​ನಲ್ಲಿ ಮಾತನಾಡಿದ ಕುಮಾರಸ್ವಾಮಿ, ಅದು‌‌ ನಮ್ಮ‌ ಕೈಯಲ್ಲಿ ಇಲ್ಲ. ನಾವು ರೆಕಮೆಂಡೇಶನ್ ಅಷ್ಟೆ ಮಾಡಬಹುದು. ಬೇರೆ ಬೇರೆ ರಾಷ್ಟ್ರಗಳಿಗೆ ಒತ್ತಾಯ ಮಾಡಿ ಘೋಷಿಸಿಲು ಕೇಳಿಕೊಳ್ಳಬಹುದು. ಆದರೆ ಅದಕ್ಕೂ ಮೊದಲು ಉಗ್ರರಿಂದ ಆಗುತ್ತಿರುವ ತೊಂದರೆಗಳನ್ನ‌ ತಪ್ಪಿಸುವ ನಿಟ್ಟಿನಲ್ಲಿ ಕ್ರಮವಹಿಸಬೇಕು. ಪಾಕಿಸ್ತಾನವನ್ನ ಉಗ್ರ ರಾಷ್ಟ್ರವಾಗಿ ಘೋಷಿಸುವುದು ಒಂದು‌ ಕಡೆ ಇರಲಿ. ದೇಶದ ಒಳಗೆ ಇರುವ ಉಗ್ರವಾದವನ್ನ ಮೊದಲು ಮಟ್ಟ ಹಾಕಬೇಕು ಎಂದು ಹೇಳಿದ್ದಾರೆ.

ನಾನು ಔರಾದ್ಕರ್ ವರದಿ ಜಾರಿಗೊಳಿಸಲು ಸಿದ್ದನಿದ್ದೇನೆ:
ರಾಘವೇಂದ್ರ ಔರಾದ್ಕರ್ ವರದಿ ಜಾರಿಗೊಳಿಸುವ ವಿಚಾರವಾಗಿ ಮಾತನಾಡಿದ ಕುಮಾರಸ್ವಾಮಿ, ವರದಿ ಬಗ್ಗೆ ನಾನಲ್ಲ, ಅಧಿಕಾರಿಗಳು ಗೊಂದಲದಲ್ಲಿದ್ದಾರೆ. ಅದನ್ನ ಸರಿಪಡಿಸಿ ಕೊಡುವಂತೆ ಅಧಿಕಾರಿಗಳಿಗೆ ಸೂಚ‌ನೆ ಕೊಟ್ಟಿದ್ದೇನೆ. ನಾನು ಔರಾದ್ಕರ್ ವರದಿ ಜಾರಿಗೊಳಿಸಲು ಸಿದ್ಧನಿದ್ದೇನೆ. ಪೊಲೀಸ್ ಸಿಬ್ಬಂದಿಗಳಿಗೆ ಈ ಬಗ್ಗೆ ಯಾವುದೇ ಆತಂಕ ಬೇಡ. ನನಗೆ ಪೊಲೀಸ್ ಸಿಬ್ಬಂದಿಗಳ ಮೇಲೆ ಕಾಳಜಿ ಇದೆ ಎಂದು ಹೇಳಿದ್ದಾರೆ.

ಮೈಸೂರು ಜಿಲ್ಲಾ ಪಂಚಾಯತ್​​​​​ನಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ವಿಚಾರವಾಗಿ ಮಾತನಾಡಿದ ಕುಮಾರಸ್ವಾಮಿ, ಸ್ಥಳಿಯವಾಗಿ ಹಲವು ಒಪ್ಪಂದಗಳು ಆಗಿರುತ್ತವೆ. ಮೊನ್ನೆ ಉತ್ತರ ಕರ್ನಾಟಕದ ಜಿಲ್ಲೆಯಲ್ಲಿ ಕಾಂಗ್ರೆಸ್ ಸ್ನೇಹಿತರು ಅವಿಶ್ವಾಸ ನಿರ್ಣಯ ಮಂಡಿಸಿದ್ದಾರೆ. ಹಾಗೇ ಇಲ್ಲೂ ಅದೇ ರೀತಿ ಆಗಿರಬಹುದು. ನನ್ನ ಗಮನಕ್ಕೆ ಬಂದಿಲ್ಲ. ಅದನ್ನ ಸ್ಥಳಿಯರೇ ನೋಡಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv