ಸದ್ಯ ಸರ್ಕಾರ ಅಸ್ಥಿರಗೊಳಿಸೋ ಪ್ರಯತ್ನಕ್ಕೆ ತಡೆ ಬಿದ್ದಿದೆ: ಹೆಚ್​​ಡಿಕೆ ಟಾಂಗ್

ಹಾಸನ: ಆಪರೇಷನ್ ಆಡಿಯೋ ತನಿಖೆ ಎಸ್ಐಟಿಗೆ ವಹಿಸಲಾಗಿದ್ದು, ಯಾರಿಗೆ ಯಾರು ಕಲ್ಲು ಹೊಡೆಯುತ್ತಾರೆ ಎಂದು ನಾಡಿನ ಜನ ಎದುರು ನೋಡುತ್ತಿದ್ದಾರೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಿಎಂ ಕುಮಾರಸ್ವಾಮಿ, ಯಾರಿಗೋ ತೊಂದರೆ ಕೊಡೋದು ನನ್ನ ಉದ್ದೇಶ ಅಲ್ಲ. ಸಂಬಂಧಪಟ್ಟ ಅಧಿಕಾರಿಗಳು ಏನು ಮಾಡಬೇಕೋ ಅದನ್ನು ಮಾಡುತ್ತಾರೆ. ಸರ್ಕಾರವನ್ನ ಅಸ್ಥಿರಗೊಳಿಸೋ ಪ್ರಯತ್ನಕ್ಕೆ ಈಗ ಒಂದು ರೀತಿಯ ತಡೆ ಬಿದ್ದಿದೆ ಎಂದು ಕುಮಾರಸ್ವಾಮಿ ಬಿಜೆಪಿಗೆ ಟಾಂಗ್ ಕೊಟ್ಟರು. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಬಗ್ಗೆ ಇನ್ನೂ ಪ್ರಸ್ತಾಪ ಆಗಿಲ್ಲ. ಈ ಬಗ್ಗೆ ದೇವೇಗೌಡರು, ರಾಹುಲ್ ಗಾಂಧಿ ತೀರ್ಮಾನ ಮಾಡಲಿದ್ದಾರೆ. ಕಾಂಗ್ರೆಸ್ ದೊಡ್ಡ ಪಕ್ಷ, ಅವರು ಏನು ತೀರ್ಮಾನ ಮಾಡುತ್ತಾರೆ ನೋಡೋಣ ಎಂದು ಹೇಳಿದ್ದಾರೆ.

ಹಾಸನ ಲೋಕಸಭಾ ಮತ ಕ್ಷೇತ್ರದಿಂದ ಪ್ರಜ್ವಲ್ ರೇವಣ್ಣ ಸ್ಪರ್ಧೆ ಬಗ್ಗೆ ಮಾತನಾಡಿದ ಕುಮಾರಸ್ವಾಮಿ, ನಮ್ಮ ಪಕ್ಷದಿಂದ ಯಾರು ಸ್ಪರ್ಧೆ ಮಾಡಬೇಕು ಎಂಬುದು ಅಂತಿಮವಾಗಿಲ್ಲ ಎಂದು ಗುಟ್ಟು ಬಿಟ್ಟುಕೊಡಲಿಲ್ಲ.

ಕೊಪ್ಪಳದಲ್ಲಿ ಐದಾರು ತಿಂಗಳಲ್ಲಿ 10 ಸಾವಿರ ಉದ್ಯೋಗ ಸೃಷ್ಟಿಯಾಗಿದೆ. ಗೊಂಬೆಗಳ ತಯಾರಿಕಾ ಘಟಕ ಶೀಘ್ರ ಕಾರ್ಯಾರಂಭ ಮಾಡಲಿದೆ. ಉತ್ತರ ಕರ್ನಾಟಕ ಸೇರಿ ಒಂದೊಂದು ಜಿಲ್ಲೆಯಲ್ಲಿ ಒಂದೊಂದು ಕೈಗಾರಿಕಾ ಘಟಕ ಸ್ಥಾಪನೆ ಮಾಡಲಾಗುತ್ತದೆ. ಎಲ್ಲಾ ಕಡೆ ಕನಿಷ್ಠ 1 ಲಕ್ಷ ಉದ್ಯೋಗ ಸೃಷ್ಟಿ ಮಾಡೋದು ನನ್ನ ಉದ್ದೇಶ ಎಂದು ಕುಮಾರಸ್ವಾಮಿ ಹೇಳಿದ್ದಾರೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv