‘ಪ್ರಚಾರ ಸಭೆಯಲ್ಲಿ ಅವರೇ ಕಲ್ಲೆಸೆದು ಜೆಡಿಎಸ್‌ ವಿರುದ್ಧ ಗೂಬೆ ಕೂರಿಸಲು ಸುಮಲತಾ ಪ್ಲಾನ್ ಮಾಡಿದ್ದಾರೆ’

ಮಂಡ್ಯ: ಚುನಾವಣೆ ಗೆಲ್ಲಲು ಸುಮಲತಾ ಹೊಸ ಪ್ಲಾನ್ ಮಾಡಿದ್ದಾರೆ. ಪ್ರಚಾರ ಸಭೆಯಲ್ಲಿ ಅವರೇ ಕಲ್ಲೆಸೆದುಕೊಂಡು ಜೆಡಿಎಸ್‌ ವಿರುದ್ಧ ಗೂಬೆ ಕೂರಿಸಲು ಪ್ಲಾನ್ ಮಾಡಿದ್ದಾರೆ. ನಾವು ಇಂತಹ ಕುತಂತ್ರ ಮಾಡಲ್ಲ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

ಮಂಡ್ಯದ  ಗೆಜ್ಜಲಗೆರೆ ಗ್ರಾಮದಲ್ಲಿ ಪುತ್ರ ನಿಖಿಲ್​ ಪರ ಎರಡನೇ ದಿನ  ಕುಮಾರಸ್ವಾಮಿ  ಪ್ರಚಾರ ಆರಂಭಿಸಿದ್ದಾರೆ. ಈ ವೇಳೆ ಮಾತನಾಡಿದ ಅವರು, ಸಂದೇಶ್ ನಾಗರಾಜ್ ನಮ್ಮಿಂದ ರಾಜಕೀಯ ಜನ್ಮ ಪಡೆದ್ರು. ಒಂದು ಚುನಾವಣೆ ಗೆಲ್ಲದ ಅವ್ರನ್ನ ಗೆಲ್ಸಿದ್ದು ನಾವು. ಈಗ ನಮ್ಮ ವಿರುದ್ಧವೇ ನಿಂತಿದ್ದಾರೆ. ಮಂಡ್ಯ ಬಜೆಟ್ ಎಂದ ಬಿಜೆಪಿ ಜೊತೆ ಸೇರಿ ಚುನಾವಣೆಯಲ್ಲಿ ಮತ ಕೇಳಲು ಬಂದವ್ರೆ. 200 ರೈತರು ಮಂಡ್ಯದಲ್ಲಿ ಆತ್ಮಹತ್ಯೆ ಮಾಡಿಕೊಂಡಾಗ ನಿಮ್ಮ ಬೆಂಬಲಕ್ಕೆ ಯಾರು ಬಂದ್ರು ಅಂತ ತೀರ್ಮಾನಿಸಿ. ಮಂಡ್ಯ ಜಿಲ್ಲೆಗೆ ನಾನು ₹9,000  ಕೋಟಿ ಹಣ ನೀಡಿದ್ದೇನೆ. ಕುಮಾರಣ್ಣ ಬೇಕೋ ಅವ್ರು ಬೇಕೋ ಎಂದು ತೀರ್ಮಾನಿಸಿ.. ನಿಖಿಲ್ ಗೆಲ್ಲಿಸಲು ಮಂಡ್ಯದಲ್ಲಿ ಅಭಿವೃದ್ಧಿಗೆ ಚಾಲನೆ ಕೊಟ್ಟಿಲ್ಲ. ನನಗೆ ಕುತಂತ್ರದ ರಾಜಕಾರಣ ಮಾಡಿ ಅಭ್ಯಾಸವಿಲ್ಲ. ನಮ್ಮ ಎದುರಾಳಿಗಳು ಮಾತನಾಡುವುದನ್ನು ಕೇಳಿದ್ದೇನೆ. ಅವರ ಕೆಲಸಗಾರರಿಗೆ ಸೈಟು, ಹಣ ಕೊಡುತ್ತೇವೆ ಅಂತಾರೆ. ಒಂದು ಮುಖ ನೋಡಿದ್ದೀರಿ, ಇನ್ನೊಂದು ಮುಖ ತೋರಿಸುತ್ತೇವೆ ಅಂತಾರೆ.. ಅವರು ಬಂದಾಗ ತಾಯಂದಿರು ಕೇಳಿ. ಅದೇನು ಇನ್ನೊಂದು ಮುಖ ತೋರಿಸುತ್ತೇನೆ ಅಂದ್ರಲ್ಲ ತೋರಿಸಿ ಎನ್ನಿ ಎಂದು ಸುಮಲತಾ ಅಂಬರೀಶ್​ ವಿರುದ್ಧ ಗುಡುಗಿದ್ರು. ನಿಖಿಲ್​ರನ್ನ ಸೋಲಿಸಲು ಎಲ್ಲಾ ಪಕ್ಷಗಳು ಒಂದಾಗಿವೆ.  ನನ್ನನ್ನ ಅತಂತ್ರ ಮಾಡಲು ಹೊರಟಿದ್ದಾರೆ ಎಂದು ಸಿಎಂ ಆರೋಪಿಸಿದ್ರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv