‘ವಿಷ್ಣು ಅಂತ್ಯಕ್ರಿಯೆಯನ್ನ ಅಭಿಮಾನ್ ಸ್ಟುಡಿಯೋದಲ್ಲಿ ಮಾಡೋದಕ್ಕೆ ಹೇಳಿದ್ದೇ ನಾನು’

ಮಂಡ್ಯ: ವಿಷ್ಣು ಅಭಿಮಾನಿಗಳು ತಮ್ಮ ಮನಸಿನಲ್ಲಿ ನೋವಿದ್ರು ನನಗೆ ಬೆಂಬಲ ಕೊಡುವುದಕ್ಕೆ ಬಂದಿದ್ದೀರಿ. ಆದರೆ, ನಾನು ಯಾರು ಗೌರವ ನಿರೀಕ್ಷೆ ಮಾಡಿದ್ನೋ ಅವರು ಏನೇನ್ ಮಾಡುತ್ತಿದ್ದಾರೆ ನೋಡಿ. ವಿಷ್ಣು ಅಂತ್ಯಕ್ರಿಯೆಯನ್ನ ಜಯನಗರದ ಚಿತಾಗಾರದಲ್ಲಿ ಮಾಡೋಕೆ ಹೋಗಿದ್ದರು. ವಿಷ್ಣು ಅಂತ್ಯಕ್ರಿಯೆಯನ್ನ ಅಭಿಮಾನ್ ಸ್ಟುಡಿಯೋದಲ್ಲಿ ಮಾಡುವುದಕ್ಕೆ ಆಗ ಸಿಎಂ ಆಗಿದ್ದ ಬಿ.ಎಸ್. ಯಡಿಯೂರಪ್ಪಗೆ ಮೊದಲು ಫೋನ್ ಮಾಡಿ ಹೇಳಿದ್ದೇ ನಾನು ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. ಜಿಲ್ಲೆಯ ಪಂಪ್ ಹೌಸ್ ಹೊಸಳ್ಳಿ ಬಳಿ ಮಾತನಾಡಿದ ಕುಮಾರಸ್ವಾಮಿ, ನೀವು ಇಚ್ಛೆ ಪಟ್ಟಂತೆ ಅಭಿಮಾನ್ ಸ್ಟುಡಿಯೋದಲ್ಲಿ ಸ್ಮಾರಕ ಮಾಡುವ ಕೆಲಸ ಮಾಡುತ್ತೇನೆ. ಈಗಾಗಲೇ ಈ ಬಗ್ಗೆ ಚರ್ಚೆಗಳು ನಡೆದಿದೆ ಎಂದೂ ಆಶ್ವಾಸನೆ ನೀಡಿದ್ದಾರೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv