ದೇವೇಗೌಡರು ಪಾಕ್‌ ಪ್ರಧಾನಿಗೆ ಕೊಡಲು ನಿಮ್ಮಂತೆ ಸೀರೆ ತೆಗೆದುಕೊಂಡು ಹೋಗಿರಲಿಲ್ಲ: ಸಿಎಂ

ಹುಬ್ಬಳ್ಳಿ: ನಾವು ದೇಶಾಭಿಮಾನಿಗಳು, ನಿಮ್ಮಿಂದ ಕಲಿಯಬೇಕಿಲ್ಲ. ದೇವೇಗೌಡರು ಪ್ರಧಾನಿಯಾಗಿದ್ದಾಗ ದೇಶ ಶಾಂತವಾಗಿತ್ತು. ದೇವೇಗೌಡರು ಪಾಕಿಸ್ತಾನದ ಪ್ರಧಾನಿಗೆ ಕೊಡಲು ನಿಮ್ಮಂತೆ ಸೀರೆ ತೆಗೆದುಕೊಂಡು ಹೋಗಿರಲಿಲ್ಲ ಎಂದು ಪ್ರಧಾನಿ ಮೋದಿ ವಿರುದ್ಧ ಸಿಎಂ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಹುಬ್ಬಳ್ಳಿಯ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು. ನಾನು ಮಂಡ್ಯದಲ್ಲಿ ₹ 150 ಕೋಟಿ ಖರ್ಚು ಮಾಡಿದ್ದರೆ ಐಟಿ ಅಧಿಕಾರಿಗಳು ಏನೂ ದನ ಕಾಯುತ್ತಿದ್ದರಾ? ನಾವು ದೇಶಾಭಿಮಾನಿಗಳು, ನಿಮ್ಮಿಂದ ಕಲಿಯಬೇಕಿಲ್ಲ. ದೇವೇಗೌಡರು ಪ್ರಧಾನಿಯಾಗಿದ್ದಾಗ ದೇಶ ಶಾಂತವಾಗಿತ್ತು. ನಮ್ಮನ್ನು ಉತ್ತರ ಕರ್ನಾಟಕದ ವಿರೋಧಿಗಳು ಎಂದು ಪಟ್ಟಕಟ್ಟಿದ್ದಾರೆ. ಚರ್ಚೆಗೆ ನಾವು ತಯಾರಿದ್ದೇವೆ, ಹೆದರಿಕೊಂಡು ಹೋಗುವವರಲ್ಲ. ರಿಮೋಟ್‌ ಮುಖ್ಯಮಂತ್ರಿ ಎಂದು ಪ್ರಧಾನಿ ನನಗೆ ಸರ್ಟಿಫಿಕೇಟ್ ಕೊಟ್ಟಿದ್ದಾರೆ.ನಾನು ರಿಮೋಟ್ ಆಗಿದ್ರೆ ಇಷ್ಟು ಅಭಿವೃದ್ಧಿ ಕೆಲಸ ಮಾಡುತ್ತಿರಲಿಲ್ಲ. ನಾನು ಗೂಂಡಾಗಿರಿ ಮಾಡುತ್ತಿಲ್ಲ. ಯಡಿಯೂರಪ್ಪ ತಮ್ಮ ಮಗನನ್ನು ಗೆಲ್ಲಿಸಲು ಅವರಪ್ಪನ ಮನೆ ದುಡ್ಡು ಖರ್ಚು ಮಾಡುತ್ತಿದ್ದಾರಾ? ಎಂದು ಸಿಎಂ ಕುಮಾರಸ್ವಾಮಿ ಪ್ರಶ್ನಿಸಿದರು.

ಪ್ರಧಾನಮಂತ್ರಿಗಳ ತರಹ ನಾನು ಬೊಗಳೆ ಮಾತನಾಡುವುದಿಲ್ಲ. ವಾಜಪೇಯಿ ಕರೆದುಕೊಂಡು ಬಂದು ಹುಬ್ಬಳ್ಳಿ- ಅಂಕೋಲಾ ರೈಲ್ವೆ ಯೋಜನೆಗೆ ಗುದ್ದಲಿ ಪೂಜೆ ಮಾಡಿಸಿದ್ರಿ. ಈಗ ಎಲ್ಲಿ ಹೋಯಿತು ಹುಬ್ಬಳ್ಳಿ-ಅಂಕೋಲ ರೈಲ್ವೆ ಯೋಜನೆ? ಎಂದು ಸಿಎಂ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ರೈತ ಸಮ್ಮಾನ್ ಯೋಜನೆಯಿಂದ ಯಾವುದೇ ಉಪಯೋಗವಿಲ್ಲ. ಬಿಜೆಪಿಗೆ ₹ 20- 30 ಕೋಟಿ‌ ಕೊಟ್ಟು ಶಾಸಕರನ್ನ ಖರೀದಿಸಲು ಹಣ ಎಲ್ಲಿಂದ ಬಂತು? ಅವನ್ಯಾವನೋ ಗಣಿ ಕಳ್ಳ ನನ್ನ ಬಗ್ಗೆ ಆರೋಪ ಮಾಡ್ತಾನೆ. ಸಿಎಂ ಕಮಿಷನ್ ತೆಗೆದುಕೊಂಡ ಚುನಾವಣೆ ಮಾಡ್ತಾರೆ ಎಂದು ಆರೋಪ ಮಾಡ್ತಾನೆ ಎಂದು ಏಕವಚನದಲ್ಲೇ ಶ್ರೀರಾಮುಲು ವಿರುದ್ಧ ಸಿಎಂ ವಾಗ್ದಾಳಿ ನಡೆಸಿದರು.

Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv