ಸಂದೇಶ್​​ ನಾಗರಾಜ್ ವಿರುದ್ಧ​​​​ ಸಚಿವರು ಗರಂ, ಸಭೆಯಿಂದ ಹೊರಕಳಿಸಿದ ಸಿಎಂ

ಬೆಂಗಳೂರು: ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ವಿಧಾನ ‌ಪರಿಷತ್ ಸದಸ್ಯ ಸಂದೇಶ್ ನಾಗರಾಜ್ ಹಾಗೂ ಇಬ್ಬರು ಸಚಿವರ ಮಧ್ಯೆ ಮಾತಿನ ಚಕಮಕಿ ನಡೆದಿದೆ.

ಸಂದೇಶ್ ನಾಗರಾಜ್ ಶಾಸಕಾಂಗ ಸಭೆಗೆ ಆಗಮಿಸಿದಕ್ಕೆ ಸಚಿವ ಸಾ.ರಾ ಮಹೇಶ್ ಹಾಗೂ ಸಿ.ಎಸ್ ಪುಟ್ಟರಾಜ್ ಕಿಡಿಕಾರಿದ್ರು. ಚುನಾವಣೆಯಲ್ಲಿ ಪಕ್ಷ ವಿರೋಧಿ ಕೆಲಸ ಮಾಡಿದ್ದಾರೆಂದು ಇಬ್ಬರು ಸಚಿವರು ಸಂದೇಶ್ ನಾಗರಾಜ್ ವಿರುದ್ಧ  ಆರೋಪ ಮಾಡಿದರು. ಸಂದೇಶ್​​​​ರನ್ನ ಹೊರಗೆ ಕಳುಹಿಸಿ ಎಂದು ಉಭಯ ಸಚಿವರು ಕೂಗಾಡಿದರು.

ಕೂಗಾಟದ ನಡುವೆ ಖುದ್ದು ಮಧ್ಯಪ್ರವೇಶಿಸಿದ ಸಿಎಂ ಹೆಚ್​​ಡಿ ಕುಮಾರಸ್ವಾಮಿ, ಸಂದೇಶ್ ನಾಗರಾಜ್​​​​​ರನ್ನ ಶಾಸಕಾಂಗ ಸಭೆಯಿಂದ ಹೊರ ಕಳುಹಿಸಿದರು. ಈ ವೇಳೆ ಮರು ಮಾತನಾಡದೆ ಸಂದೇಶ್ ನಾಗರಾಜ್ ಸಭೆಯಿಂದ ಹೊರ ನಡೆದರು.

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv