’ಡಾ.ರಾಜ್​​ ನಿಧನ ಸುದ್ದಿ ನನ್ನ ಗಮನಕ್ಕೆ ತಂದಿರಲಿಲ್ಲ, ಹೀಗಾಗಿ ಅಂತ್ಯಕ್ರಿಯೆ ವೇಳೆ ಗೊಂದಲವಾಯ್ತು’

ಮಂಡ್ಯ: ಡಾ. ರಾಜಕುಮಾರ್ ನಿಧನರಾದಾಗ, ವಿಷಯವನ್ನ ನನ್ನ ಗಮನಕ್ಕೆ ತಾರದೆ ಮಾಧ್ಯಮಕ್ಕೆ ಘೋಷಣೆ ಮಾಡಿದ್ರು. ಹೀಗಾಗಿ ಅಂದು ಯಾವುದೇ ಮುಂಜಾಗ್ರತೆ ತೆಗೆದುಕೊಳ್ಳಲಾಗಲಿಲ್ಲ. ಅದ್ದರಿಂದ ರಾಜಕುಮಾರ್ ಅಂತ್ಯಕ್ರಿಯೆಯ ವೇಳೆ ಹಲವು ಗೊಂದಲವಾಯ್ತು ಎಂದು ಸಿಎಂ ಕುಮಾರಸ್ವಾಮಿ ಹೇಳಿದರು. 

ಜಿಲ್ಲೆಯ ಕೆ.ಆರ್.ಪೇಟೆಯಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಕುಮಾರಸ್ವಾಮಿ, ನಾನು ಮುಖ್ಯಮಂತ್ರಿ ಆದ ದಿನದಿಂದ ಒಂದು ದಿನವೂ ನೆಮ್ಮದಿಯಾಗಿ ಆಡಳಿತ ಮಾಡಲು ಬಿಟ್ಟಿಲ್ಲ. ನಾನು 120 ಸೀಟ್ ಗೆದ್ದಿದ್ರೆ ನೆಮ್ಮದಿಯಾಗಿ ಆಡಳಿತ ನಡೆಸುತ್ತಿದ್ದೆ. ಅಂಬರೀಶ್​ ಅವರನ್ನು ಮೊದಲು ಎಂಪಿ ಮಾಡಿದ್ದು ಜನತಾ ಪಕ್ಷ. ನಂತರ ಕಾಂಗ್ರೆಸ್‌ಗೆ ಹೋದರು. ನಾನು ಅವರಿಗೆ ಏನು ಸಹಾಯ ಮಾಡಿದ್ದೇನೆ. ಅವರು ನನಗೆ ಏನು ಸಹಾಯ ಮಾಡಿದ್ದಾರೆ ಅನ್ನೋದರ  ಬಗ್ಗೆ ಈಗ ಮಾತನಾಡುವುದು ಬೇಡ. ಅಂಬರೀಶ್​ ನಿಧನರಾದ ಸುದ್ದಿ ನನಗೆ ನನ್ನ ಮಗ ತಿಳಿಸಿದ. ಆಸ್ಪತ್ರೆಗೆ ಹೋದಾಗ ಅಲ್ಲಿ, ಇಂದು ಚುನಾವಣೆ ನಡೆಸಲು ಬಂದವರು ಇರಲಿಲ್ಲ. ಆ ತಾಯಿಗೆ ಕೇಳುತ್ತೇನೆ, ಆ ಒಂದು ಸಣ್ಣ ಸೌಜನ್ಯ ಅವರಿಗೆ ಇದೆಯಾ..? ಅವರು ವಾಸ ಮಾಡುತ್ತಿದ್ದ ಮನೆಗೆ ಪಾರ್ಥಿವ ಶರೀರ ತೆಗೆದುಕೊಂಡು ಹೋಗಲು ವ್ಯವಸ್ಥೆ ಮಾಡಿದೆ.  ನಂತರ ಮಧ್ಯ ರಾತ್ರಿಯಲ್ಲಿ ಒಂದು ರೂಂ ಕ್ಲೀನ್ ಮಾಡಿಸಿ ಅಂಬರೀಶ್​ ಬಾಳಿದ ಮನೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿದೆ ಅಂತಾ ಸುಮಲತಾ ವಿರುದ್ಧ ಅವರು ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ರು.