ಜನತಾದರ್ಶನದಲ್ಲಿ ಸಿಎಂ ಮುಂದೆ ಕಣ್ಣೀರಿಟ್ಟ ಕುಬ್ಜ ದಂಪತಿ

ಬೆಂಗಳೂರು: ಕೆಲ ದಿನಗಳ ಗ್ಯಾಪ್​ ನಂತರ ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಮುಖ್ಯಮಂತ್ರಿ ಹೆಚ್​.ಡಿ. ಕುಮಾರಸ್ವಾಮಿ ಜನತಾದರ್ಶನ ನಡೆಸಿದ್ರು. ಈ ವೇಳೆ ಮಾಗಡಿಯಿಂದ ಬಂದಿದ್ದ ಕುಬ್ಜ ದಂಪತಿ ಸಿಎಂ ಬಳಿ ತಮ್ಮ ನೋವು ತೋಡಿಕೊಂಡು ಕಣ್ಣೀರಿಟ್ಟರು.
ಮಾಗಡಿಯ ಕುಬ್ಜ ದಂಪತಿ ಸರಸ್ವತಿ ರಂಗಸ್ವಾಮಿ ಅಳಲು ತೋಡಿಕೊಂಡವರು. ನಾವು ಬಳೆ ವ್ಯಾಪಾರ ಮಾಡುತ್ತೇವೆ, ನಮ್ಮದು ₹ 1 ಲಕ್ಷ ಸಾಲ ಇದೆ. ಆದರೆ ನಮಗೆ ತೀವ್ರ ಅನಾರೋಗ್ಯ ಕಾಡುತ್ತಿದೆ. ಇದ್ರಿಂದ ಜೀವನ ಸಾಗಿಸಲು ಸಾಧ್ಯವಾಗುತ್ತಿಲ್ಲ. ಜೀವನೋಪಾಯಕ್ಕೆ ನೆರವು ನೀಡಿ ಅಂತಾ ಸಿಎಂ ಮುಂದೆ ಕಣ್ಣೀರಿಟ್ಟರು. ತಕ್ಷಣವೇ ಇದಕ್ಕೆ ಸ್ಪಂದಿಸಿದ ಸಿಎಂ, ಅವರಿಗೆ ಸಹಾಯ ಮಾಡುವ ಭರವಸೆ ನೀಡಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv