ನಿಖಿಲ್ ಎಲ್ಲಿದ್ಯಪ್ಪ ಅಂದ್ರೆ..ನಮ್ಮ ಹೃದಯಲ್ಲಿದ್ದಾನೆ ಅಂತಾ ಹೇಳಿ: ಸಿಎಂ

ಮಂಡ್ಯ: ಇಂದು ಸಿಎಂ ಕುಮಾರಸ್ವಾಮಿ ತಮ್ಮ ಮಗನ  ನಿಖಿಲ್​​​ ಪರ ಕೆ.ಆರ್. ನಗರ ತಾಲೂಕಿನ ನಾರಾಯಣಪುರ ಗ್ರಾಮದಲ್ಲಿ ಪ್ರಚಾರ ನಡೆಸಿದರು. ಈ  ವೇಳೆ ನಿಖಿಲ್ ಎಲ್ಲಿದ್ದೀಯಪ್ಪ, ಎಂದು ಬಹಳ ಚರ್ಚೆಯಾಗ್ತಿದೆ. ಈ ಬಗ್ಗೆ ಸ್ವಲ್ಪ ಮಾತನಾಡಿ ಎಂದು ಓರ್ವ ಯುವಕ ಸಿಎಂಗೆ ಕೇಳಿದ. ಇದಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ನಿಖಿಲ್ ಎಲ್ಲಿದ್ದೀಯಪ್ಪ ಅಂದ್ರೆ ನಮ್ಮ ಹೃದಯಲ್ಲಿದ್ದಾನೆ ಅಂತಾ ಹೇಳಬೇಕು ಎಂದು ಯುವಕರಿಗೆ ತಿಳಿಸಿದರು.

ಯುವಕರು ಈ ಟ್ರೋಲ್​ಗಳ ಬಗ್ಗೆ ತಲೆ ಕಡೆಸಿಕೊಳ್ಳಬೇಡಿ. ಆ ಟ್ರೋಲ್ ಮಾಡುವವರು ಯಾರು..? ನಿಖಿಲ್ ಎಲ್ಲಿದ್ದೀಯಪ್ಪ ಎಂದರೆ ನಮ್ಮ ಹೃದಯದಲ್ಲಿದ್ದಾನೆ ಅಂತ ಹೇಳಿ. ಇತ್ತೀಚಿನ ದಿನಗಳಲ್ಲಿ ಒಂದು ತಂಡ ಕೆಟ್ಟ ರೀತಿಯಲ್ಲಿ ಹೀಗೆ ಬಿಂಬಿಸುತ್ತಿದೆದೆ. ಈ ರೀತಿಯ ಕೆಟ್ಟ ಅಭಿರುಚಿ ಇಟ್ಟುಕೊಂಡಿರೋದು ಸಮಾಜ ಹಾಳು ಮಾಡುವಂಥದ್ದು. ಇಂತಹವರ ಬಗ್ಗೆ ನಾವು ಬಹಳ ಎಚ್ಚರಿಕೆಯಿಂದ ಇರಬೇಕು ಎಂದು ಸಿಎಂ ಹೇಳಿದ್ರು. ಇನ್ನು ಪ್ರಚಾರದಲ್ಲಿ ಕುಮಾರಸ್ವಾಮಿ ಅವರಿಗೆ ಸಚಿವ ಸಾ. ರಾ.ಮಹೇಶ್ ಹಾಗೂ ಚಿತ್ರ ನಿರ್ದೇಶಕ ರಾಜೇಂದ್ರಸಿಂಗ್ ಬಾಬು ಸಾಥ್ ನೀಡಿದರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv