ನಿಖಿಲ್​ ಕುಮಾರಸ್ವಾಮಿ ಪರ ಇಂದು ತಂದೆ ತಾಯಿ ಮತಯಾಚನೆ

ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ನಿಖಿಲ್​ ಕುಮಾರಸ್ವಾಮಿ ಪರ ಇಂದು ತಂದೆ ಹೆಚ್​ಡಿ ಕುಮಾರಸ್ವಾಮಿ ಹಾಗೂ ತಾಯಿ ಅನಿತಾ ಕುಮಾರಸ್ವಾಮಿ ಪ್ರಚಾರ ನಡೆಸಲಿದ್ದಾರೆ. ನಿಖಿಲ್​ ಪರ ಮದ್ದೂರು ಕ್ಷೇತ್ರದ ಹೊನ್ನಲಗೆರೆಯಲ್ಲಿ ಸಿಎಂ‌ ಕುಮಾರಸ್ವಾಮಿ ಪ್ರಚಾರ ನಡೆಸುತ್ತಾರೆ. ಇನ್ನೊಂದೆಡೆ ಶ್ರೀರಂಗಪಟ್ಟಣ ತಾಲೂಕಿನ ಕೆ.ಶೆಟ್ಟಿಹಳ್ಳಿ ಭಾಗದಲ್ಲಿ ಶಾಸಕಿ ಅನಿತಾ ಕುಮಾರಸ್ವಾಮಿ ಮಗನ ಪರವಾಗಿ ಮತಬೇಟೆ ನಡೆಸಲಿದ್ದಾರೆ.

ಮತ್ತೊಂದೆಡೆ ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಜೋಡೆತ್ತುಗಳ ಮತಬೇಟೆ ಮುಂದುವರೆಯಲಿದೆ. ಶ್ರೀರಂಗಪಟ್ಟಣದ ಕೊತ್ತತ್ತಿ ಭಾಗದಲ್ಲಿ ದರ್ಶನ್ ಪ್ರಚಾರ  ನಡೆಸಲಿದ್ದಾರೆ. ಹಾಗೇ ನಾಗಮಂಗಲ ಕ್ಷೇತ್ರದಲ್ಲಿ ಯಶ್ ಮತಯಾಚನೆ ಮಾಡಲಿದ್ದಾರೆ. ಮಳವಳ್ಳಿಯಲ್ಲಿ‌ ಸುಮಲತಾ ಅಂಬರೀಶ್ ರೋಡ್ ಶೋ ನಡೆಲಿದ್ದಾರೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv