ದಸರಾ ಕಾರ್ಯಕ್ರಮದಲ್ಲೂ ಸಿಎಂಗೆ ಸರ್ಕಾರ ಬೀಳೋ ಟೆನ್ಷನ್!

ಮೈಸೂರು:  ರಾಮೇಶ್ವರಕ್ಕೆ ಹೋದ್ರೂ ಶನೀಶ್ವರನ ಕಾಟ ತಪ್ಪಲಿಲ್ಲ ಅನ್ನೋ ಗಾದೆ ಮಾತಂತೆ, ಸಿಎಂ ಕುಮಾರಸ್ವಾಮಿಗೆ ದಸರಾ ಕಾರ್ಯಕ್ರಮದಲ್ಲೂ ಸರ್ಕಾರವನ್ನು ಉಳಿಸೋದೆ ಚಿಂತೆಯಾಗಿದೆ. ದಸರಾ ಹೇಗೋ ನಡೆಯುತ್ತೆ, ಆದ್ರೆ ಸರ್ಕಾರವನ್ನು ಹೇಗೆ ಉಳಿಸಿಕೊಳ್ಳುವುದಪ್ಪ ಅನ್ನೋ ಚಿಂತೆಯಲ್ಲೇ, ಇಂದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದಂತಿತ್ತು.

ದಸರಾ ಹಬ್ಬದ ಅಂಗವಾದ ನಗರದಲ್ಲಿ ನಡೆದ ‘ದಸರಾ ಚಲನಚಿತ್ರೋತ್ಸವ’ ಕಾರ್ಯಕ್ರಮದ ಉದ್ಘಾಟನೆ ಬಳಿಕ ಮಾತನಾಡಿದ ಸಿಎಂ, ಸರ್ಕಾರ ಬೀಳೋ ಟೆನ್ಷನ್ ಆದ್ರೆ ಹಳೆಯ ಹಾಡುಗಳನ್ನ ಕೇಳಿ ಮೈಂಡ್ ರಿಫ್ರೆಶ್ ಮಾಡ್ಕೊತೇನೆ. ನೀವೂ ಕೂಡಾ ಹಳೆ ಹಾಡುಗಳನ್ನ ಕೇಳಿ ನೆಮ್ಮದಿಯಾಗಿ ಇರಿ ಎಂದು ಜನತೆಗೆ ಸಿಎಂ ಹೇಳಿದ್ದಾರೆ.

ಇದೇ ವೇಳೆ, ನನ್ನ ವೃತ್ತಿ ಜೀವನ ಸಿನಿಮಾ ರಂಗದಿಂದ ಆರಂಭವಾಯ್ತು. ಡಾ.ರಾಜ್ ಕುಮಾರ್ ಚಿತ್ರಗಳು ನನಗೆ ಮಾದರಿಯಾಗಿವೆ. ಅವರ ಬಂಗಾರದ ಮನುಷ್ಯ ಚಿತ್ರವನ್ನ ನಾನು 100 ಬಾರಿ ನೋಡಿದ್ದೇನೆ. ರಾಜ್ ಸಿನಿಮಾ ನೋಡಿಯೇ ನನಗೆ ಬಡವರ ಪರ ಕಾಳಜಿ ಹೆಚ್ಚಾಯ್ತು ಅಂತಾ ತಿಳಿಸಿದರು. ಇತ್ತೀಚೆಗೆ ಬರುತ್ತಿರುವ ಸಿನಿಮಾಗಳಲ್ಲಿ ಮಚ್ಚು-ಲಾಂಗು ಹೆಚ್ಚಾಗಿದೆ. ಈಗಿನ ನಿರ್ದೇಶಕರು ಲಾಂಗು ಮಚ್ಚು ಹಿಡಿದಿರುವ ದೃಶ್ಯಗಳನ್ನು ಕಡಿಮೆ ಮಾಡಬೇಕು ಅಂತಾನೂ ಮುಖ್ಯಮಂತ್ರಿ ಕುಮಾರಸ್ವಾಮಿ ಸಲಹೆ ನೀಡಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv