‘ಮುಖ್ಯಮಂತ್ರಿ ಸ್ಥಾನ ಯಾರಿಗೂ ಖಾಯಂ ಅಲ್ಲ’

ದಾವಣಗೆರೆ: ‘ಡಿಸಿಎಂ ಪರಮೇಶ್ವರ್​ ಹೇಳಿರುವುದರಲ್ಲಿ ಯಾವುದೇ ತಪ್ಪಿಲ್ಲ. ಸಿಎಂ ಸ್ಥಾನ ಯಾರಿಗೂ ಖಾಯಂ ಅಲ್ಲ’ ಅಂತಾ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ. ಇಂದು ಬೆಳಗಾವಿಯಲ್ಲಿ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಮಾತನಾಡಿ, ಈಗ ಡಿಸಿಎಂ ಆಗಿದ್ದೇನೆ. ಹೈಕಮಾಂಡ್‌ ಮುಂದೆ ಯಾವುದೇ ಜವಾಬ್ದಾರಿ ಕೊಟ್ಟರೂ ನಿಭಾಯಿಸುತ್ತೇನೆ ಅಂತಾ ಹೇಳಿದ್ದರು. ಈ ಹೇಳಿಕೆಯಿಂದ ಪರಮೇಶ್ವರ್ ಅವರು ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ ಅಂತಾ ಬಿಂಬಿಸಲಾಗಿತ್ತು.

ಪರಮೇಶ್ವರ್ ಅವರ ಹೇಳಿಕೆ ಸಂಬಂಧ ಪ್ರತಿಕ್ರಿಯಿಸಿದ ಸಿಎಂ ಕುಮಾರಸ್ವಾಮಿ, ಪರಮೇಶ್ವರ್​ ಹೇಳಿಕೆಯನ್ನ ಬೇರೆ ರೀತಿಯಲ್ಲಿ ವ್ಯಾಖ್ಯಾನ ಮಾಡೋದು ಬೇಡ. ರಾಜ್ಯದಲ್ಲಿ ಎಷ್ಟೋ ಜನ ಮುಖ್ಯಮಂತ್ರಿಗಳಾಗಿದ್ದಾರೆ. ಸಿಎಂ ಸ್ಥಾನಕ್ಕೆ ಅರ್ಹತೆ ಇರುವವರಲ್ಲಿ ಪರಮೇಶ್ವರ್ ಕೂಡ ಒಬ್ಬರು ಅಂತಾ ಹೇಳಿದರು.

ಇದೇ ವೇಳೆ ರೈತರಿಗೆ ಖಾಸಗಿ ಬ್ಯಾಂಕ್​ಗಳಿಂದ ಕಿರುಕುಳ ವಿಚಾರವಾಗಿ ಮಾತನಾಡಿ, ರೈತರಿಗೆ ಕಿರುಕುಳ ನೀಡುವ ಬ್ಯಾಂಕ್​ಗಳ ಉದ್ಧಟತನ ಸಹಿಸಲು ಆಗದು. ನಮ್ಮಲ್ಲೂ ಬೇರೆ ಅಸ್ತ್ರಗಳಿವೆ. ಸರ್ಕಾರ ಬ್ಯಾಂಕ್​ಗಳಲ್ಲಿ ಮುಂಗಡ ಠೇವಣಿ ಇಟ್ಟಿದೆ. ರೈತರಿಗೆ ಕಿರುಕುಳ ನೀಡಿದರೆ ಠೇವಣಿ ವಾಪಸ್ ಪಡೆಯಬೇಕಾಗುತ್ತದೆ ಅಂತಾ ರೈತರಿಗೆ ನೋಟಿಸ್ ಕೊಟ್ಟಿರುವ ಖಾಸಗಿ ಬ್ಯಾಂಕ್​ಗಳಿಗೆ ಖಡಕ್ ಎಚ್ಚರಿಕೆ ನೀಡಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv