‘ಬೆಂಗಳೂರಿನ ನಾಲ್ಕು ಕ್ಷೇತ್ರಗಳಲ್ಲೂ ಮೈತ್ರಿ ಅಭ್ಯರ್ಥಿಗಳೇ ಗೆಲ್ಲೋದು’

ಹುಬ್ಬಳ್ಳಿ: ಇಷ್ಟು ದಿನ ಪುತ್ರ ನಿಖಿಲ್​ ಗೆಲ್ಲಿಸಲು ಮಂಡ್ಯದಲ್ಲಿ ಬೀಡು ಬಿಟ್ಟಿದ್ದ ಸಿಎಂ ಹೆಚ್​ಡಿ ಕುಮಾರಸ್ವಾಮಿ, ಇಂದು ಉತ್ತರ ಕರ್ನಾಟಕದ ಮೈತ್ರಿ ಅಭ್ಯರ್ಥಿಗಳ ಪರ ರೋಡ್​ಶೋ ಮಾಡಲಿದ್ದಾರೆ. ಧಾರವಾಡದಲ್ಲಿ ವಿನಯ್ ಕುಲಕರ್ಣಿ, ವಿಜಯಪುರದಲ್ಲಿ ಡಾ.ಸುನೀತಾ ಚವ್ಹಾಣ್ ಹಾಗೂ ಬಾಗಲಕೋಟೆಯಲ್ಲಿ ವೀಣಾ ಕಾಶಪ್ಪನವರ್​ ಪರ ಭರ್ಜರಿ ಪ್ರಚಾರ ಮಾಡಲಿದ್ದಾರೆ.
ಇನ್ನೂ ಹುಬ್ಬಳ್ಳಿಯಲ್ಲಿ ಮಾತನಾಡಿದ ಸಿಎಂ ಕುಮಾರಸ್ವಾಮಿ ಬೆಂಗಳೂರಿನಲ್ಲಿ ವೋಟಿಂಗ್ ಪರ್ಸೆಂಟೇಜ್​ಕಡಿಮೆಯಾಗಿದೆ. ಅದೂ ನಮಗೆ ಅಡ್ವಾಂಟೇಜ್ ಆಗಬಹುದು ಎಂದಿದ್ದಾರೆ. ಅಲ್ಲದೇ ಬೆಂಗಳೂರಿನ ನಾಲ್ಕು ಕ್ಷೇತ್ರಗಳಲ್ಲಿ ಮೈತ್ರಿ‌ಪಕ್ಷದ ಅಭ್ಯರ್ಥಿಗಳ ಗೆಲ್ಲುತ್ತಾರೆ ಅಂತಾ ಭವಿಷ್ಯ ನುಡಿದಿದ್ದಾರೆ.

ಇನ್ನು ಉಳಿದೆಡೆ ಕಳೆದ ವಿಧಾನ ಸಭೆ ಚುನಾವಣೆಗೆ ಹೋಲಿಸಿದ್ರೆ ಈ ಲೋಕಸಭೆ ಚುನಾವಣೆಯಲ್ಲಿ ಉತ್ತಮ ಮತದಾನವಾಗಿದೆ ಅಂತಾ ಅಭಿಪ್ರಾಯ ಪಟ್ಟ ಅವರು ಮಂಡ್ಯದಲ್ಲಿ ಮತದಾನ ಹೆಚ್ಚಳಗೊಂಡಿರುವುದು ಕೂಡ ಪಕ್ಷಕ್ಕೆ ಅನುಕೂಲವಾಗಲಿದೆ ಎಂದಿದ್ದಾರೆ. ಇದರ ಜೊತೆಗೆ ಎರಡನೇ ಹಂತದಲ್ಲಿ ಚುನಾವಣೆ ನಡೆಯುವ 14 ಕ್ಷೇತ್ರ ಪೈಕಿ ಕನಿಷ್ಠ ಹತ್ತು ಕ್ಷೇತ್ರಗಳಿಗೆ ಭೇಟಿ ನೀಡುತ್ತೇನೆ ಎಂದ ಸಿಎಂ ಕುಮಾರಸ್ವಾಮಿ ಈಗಾಗಲೇ ಶಿವಮೊಗ್ಗ, ಉತ್ತರ ಕನ್ನಡಕ್ಕೆ ಭೇಟಿ ನೀಡಿದ್ದೇನೆ. ನಾಳೆ ಮೈತ್ರಿ ಪಕ್ಷದ ಹುಬ್ಬಳ್ಳಿಯ ಸಾರ್ವಜನಿಕ ಸಭೆಯಲ್ಲಿಯು ಭಾಗಿಯಾಗುತ್ತೇನೆ ಎಂದಿದ್ದಾರೆ.