ದೇವೇಗೌಡರು ತಿನ್ನುವ 4 ಮುದ್ದೆಯನ್ನ ಬಿಎಸ್​ವೈಗೆ ತಿನ್ನಲು ಆಗುತ್ತಾ..? -ಸಿಎಂ ಇಬ್ರಾಹಿಂ

ತುಮಕೂರು: ನಮಗೆ ಮೋದಿ ಭಯವಿಲ್ಲ, ನೋವಿದೆ ಅಂತಾ ಸಿಎಂ ಇಬ್ರಾಹಿಂ ಬೇಸರ ವ್ಯಕ್ತಪಡಿಸಿದ್ದಾರೆ. ತುಮಕೂರಲ್ಲಿ ದೇವೇಗೌಡರ ಪರ ಪ್ರಚಾರ ನಡೆಸಿ ಮಾತನಾಡಿದ ಅವರು, ದೇವೇಗೌಡರು‌ ಚುನಾವಣೆಗೆ ನಿಂತಾಗ ಯಾರೂ ಕೂಡ ಅವರ ಎದುರು ಸ್ಪರ್ಧಿಸಬಾರದಿತ್ತು. ದೇವೇಗೌಡ ರಾಜ್ಯದ ಏಕೈಕ‌ ಪ್ರಧಾನಿಯಾಗಿದ್ದವರು. ಪ್ರಧಾನಿ ಮೋದಿ, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಇವ್ರೆಲ್ಲಾ ದೇವೇಗೌಡರ ವಿರುದ್ಧ ಮಾತನಾಡಿದಾಗ ನೋವಾಗುತ್ತದೆ. ದೇವೇಗೌಡರು ತಿನ್ನುವ ನಾಲ್ಕು ಮುದ್ದೆಯನ್ನು ಯಡಿಯೂರಪ್ಪಗೆ ತಿನ್ನಲು ಆಗುತ್ತಾ? 4 ಕೋಟಿ ಜನ ಹೊಟ್ಟೆ ತುಂಬಾ ಊಟ ಮಾಡಲಾಗುತ್ತಿದೆ. ಇಂದಿರಾ ಕ್ಯಾಂಟೀನಿದೆ. ದೆಹಲಿಯಲ್ಲಿ‌ ಹೊಟ್ಟೆ ಖಾಲಿ‌ ಮಾಡಲು ಹತ್ತು ರೂಪಾಯಿ‌ ಕೊಡಬೇಕು. ಇಲ್ಲಿ ಹತ್ತು ರೂಪಾಯಿಗೆ ಹೊಟ್ಟೆ ತುಂಬುತ್ತದೆ ಅಂತಾ ಹೇಳಿದರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv