ಕೆಆರ್​ಎಸ್​ಗೆ ಹೆಚ್​ಡಿಕೆ ಬಾಗಿನ ಅರ್ಪಿಸುವ ಸಾಧ್ಯತೆ

ಬೆಂಗಳೂರು: ಕೆಆರ್​ಎಸ್​​ ಜಲಾಶಯ ಭರ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕೆಆರ್​ಎಸ್​ಗೆ ಭೇಟಿ ನೀಡುವ ಸಾಧ್ಯತೆ ಇದೆ. ಮುಂದಿನ ಭಾನುವಾರ ಅಥವಾ ಸೋಮವಾರ ಭೇಟಿ ನೀಡಿ, ಭೇಟಿ ವೇಳೆ ಬಾಗಿನ ಅರ್ಪಿಸಲಿದ್ದಾರೆ ಎನ್ನಲಾಗಿದೆ. ಸಿಎಂ ಹೆಚ್.ಡಿ.ಕುಮಾರಸ್ವಾಮಿ ಜೊತೆಗೆ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಕೂಡ ಜಲಾಶಯಕ್ಕೆ ತೆರಳುವ ಸಾಧ್ಯತೆ ಇದೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆ.ಆರ್‌.ಎಸ್ ಜಲಾಶಯ ಭರ್ತಿಯಾಗುತ್ತಿರುವ ಕಾವೇರಿಗೆ ಬಾಗಿನ ಅರ್ಪಿಸಲು ನಾಯಕರುಗಳು ಮುಂದಾಗಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv