ದುರ್ಗದಲ್ಲಿ ಪ್ರಧಾನಿ ಭಾಷಣ ಗಮನಿಸಿದ್ದೇನೆ, ಯಾವುದೇ ಕೊಡುಗೆ ಬಗ್ಗೆ ಚರ್ಚೆಯಾಗಿಲ್ಲ: ಸಿಎಂ

ಚಿತ್ರದುರ್ಗ: ಚಿತ್ರದುರ್ಗದ ಬಿಜೆಪಿ ಕಾರ್ಯಕ್ರಮದಲ್ಲಿ ಪ್ರಧಾನಿ ಭಾಷಣ ಗಮನಿಸಿದ್ದೇನೆ. ಈ ಭಾಷಣದಲ್ಲಿ ಯಾವುದೇ ಕೊಡುಗೆ ಬಗ್ಗೆ ಚರ್ಚೆ ಆಗಿಲ್ಲ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ. ಚಿತ್ರದುರ್ಗದಲ್ಲಿ ಮಾತನಾಡಿದ ಅವರು, ಮಹಿಳೆಯರ ರಕ್ಷಣೆ, ಯುವಕರಿಗೆ ನೀಡಿದ ಉದ್ಯೋಗದ ಬಗ್ಗೆ ಮಾತನಾಡಿಲ್ಲ. ಅವರು ಬಿಜೆಪಿ ಅಭ್ಯರ್ಥಿ ಪರ ಮತ ಕೇಳಿಲ್ಲ, ಆದ್ರೆ ರೈತ ಮತ್ತು ಸೈನಿಕರಿಗಾಗಿ ಕೇಳಿದ್ದಾರೆ. ಆದ್ರೆ ಅವರಿಗೆ ಮೋದಿ ನೀಡಿರುವ ರಕ್ಷಣೆ ಏನು? ಎಂದು ಸಿಎಂ ಕುಮಾರಸ್ವಾಮಿ ಪ್ರಶ್ನಿಸಿದ್ರು.

ನಾನು ಗಡಿ ರಕ್ಷಣೆ ಬಗ್ಗೆ ಮಾತನಾಡಿದ್ದು ನಿಜ. ಆದ್ರೆ ಅವರಿಗೆ ಅಲ್ಲಿ ರಕ್ಷಣೆ ಸಿಗದ ಹಿನ್ನೆಲೆ ನಾವು ಅವರಿಗಾಗಿ ಕಣ್ಣೀರು ಹಾಕಿದ್ದೇವೆ. ಪುಲ್ವಾಮಾ ದಾಳಿ ಆದಾಗ ಹಿಂದುಳಿದ ವರ್ಗದ ಸೈನಿಕ ಹುತಾತ್ಮ ಆದಾಗ ನಾವು ಕಣ್ಣೀರು ಹಾಕಿದ್ದೇವೆ. ಮೋದಿ ಪಾಕಿಸ್ತಾನಕ್ಕೆ ಉಡುಗೊರೆ ತೆಗೆದುಕೊಂಡು ಹೋಗುತ್ತಾರೆ. ಆದ್ರೆ ಸಾಲಮನ್ನಾ ಮಾಡಿಲ್ಲ ಅಂತಾರೆ. ಆದ್ರೆ ನಾವು ರೈತ ಕುಟುಂಬಕ್ಕೆ ನಾವು ಹಣ ತಲುಪಿಸಿದ್ದೇವೆ. ನರೇಂದ್ರ ಮೋದಿ ಒಬ್ಬ ಸುಳ್ಳುಗಾರ. ಮೋದಿ ರೈತರ ಬಗ್ಗೆ ಎಂದೂ ಮಾತನಾಡಲ್ಲ. ತಮಿಳುನಾಡಿನ ರೈತರು ಬೆತ್ತಲೆ ಪ್ರತಿಭಟನೆ ಮಾಡಿದರೂ ಸಹ ಅವರು ಅದಕ್ಕೆ ಕರಗಲಿಲ್ಲ. ಮಹಾದಾಯಿ ನೀರು ಹಂಚಿಕೆ ವಿಚಾರದಲ್ಲಿ ಅವ್ರು ಯೋಚನೆ ಮಾಡಿಲ್ಲ. ಅಪ್ಪರ್ ಭದ್ರಾ ಯೋಜನೆ ಹಿಂದಿನ ಸಮ್ಮಿಶ್ರ ಸರ್ಕಾರದ ಕಾಲದಲ್ಲಿಯೇ ಚಾಲನೆ ನೀಡಿದ್ದೇವೆ. ಇದ್ಯಾವುದೂ ಬಿಜೆಪಿ ಕೊಟ್ಟಿಲ್ಲ ಎಂದು ಹೆಚ್‌ಡಿಕೆ ವಾಗ್ದಾಳಿ ನಡೆಸಿದರು.

ಪ್ರಧಾನಿ ಕಮಿಷನ್ ಬಗ್ಗೆ ಮಾತನಾಡುತ್ತಾರೆ. ಭದ್ರಾ ಯೋಜನೆಯ ಟೆಂಡರ್‌ಗೆ ಆಗಿನ ಇಂಜಿನಿಯರ್‌ಗೆ ಚೆಕ್ ಮೂಲಕ ಹಣ ನೀಡಿದ್ದು, ದಾಖಲೆ ಮೂಲಕ ಬಿಡುಗಡೆ ಮಾಡಿದ್ದೇವೆ. ಪ್ರಧಾನಿಗೆ ಈ ದಾಖಲೆ ಗಳನ್ನ ಕಳುಹಿಸಿಕೊಡುತ್ತೇನೆ. ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಮೋದಿಯವರಿಗೆ ನೈತಿಕತೆ ಇಲ್ಲ. ಚಿತ್ರದುರ್ಗದ ನೀರಿನ ಕೊರತೆಯನ್ನು ಸಂಪೂರ್ಣವಾಗಿ ನಿವಾರಿಸುವ ಬಗ್ಗೆ ನಾವು ಮಾಡುತ್ತೇವೆ. ಮೋದಿಗೆ ದೇಶದ ಭದ್ರತೆ ಬಗ್ಗೆ ಯೋಚನೆ ಇಲ್ಲ. ನರೇಗಾ ಯೋಜನೆ ಅದು ರಾಹುಲ್ ಗಾಂಧಿ ತಂದ ಯೋಜನೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದರು.