‘ರಾಜ್ಯದಲ್ಲಿ ಸಮರ್ಥವಾದ ಮೈತ್ರಿ ಸರ್ಕಾರವಿದೆ, ಮೊದಿಯವರ ಹಾಗೆ ಅಸಮರ್ಥ ಅಲ್ಲ’

ಹುಬ್ಬಳ್ಳಿ: ಮಾಹಿತಿಗಳನ್ನು ತಿರುಚಿ ತಮ್ಮ ಸ್ಥಾನದ ಗೌರವವನ್ನು ಮರೆತು ನಿನ್ನೆ ಪ್ರಧಾನಿಗಳು ಮಾತನಾಡಿದ್ದಾರೆ. ರಾಜ್ಯದಲ್ಲಿ ಸಮರ್ಥವಾದ ಮೈತ್ರಿ ಸರ್ಕಾರವಿದೆ. ಮೊದಿಯವರ ಹಾಗೆ ಅಸಮರ್ಥ ಸರ್ಕಾರ ನಮ್ಮದಲ್ಲ ಎಂದು ಸಿಎಂ ಹೆಚ್.ಡಿ. ಕುಮಾರಸ್ವಾಮಿ ತಮ್ಮ ಮೈತ್ರಿ ಸರ್ಕಾರವನ್ನ ಸಮರ್ಥ ಸರ್ಕಾರ ಎಂದು ಹೇಳಿದ್ದಾರೆ.

ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹೆಚ್.ಡಿ. ಕುಮಾರಸ್ವಾಮಿ, ಕೇಂದ್ರ ಸರ್ಕಾರ ಸಮರ್ಥವಾಗಿದ್ದರೆ, ಆರ್ಥಿಕ ಬಲಾಡ್ಯವಾಗಿದ್ದರೆ ನರೇಗಾ ಹಣವನ್ನ ಯಾಕೆ ಬೀಡುಗಡೆ ಮಾಡಲಿಲ್ಲ..? ಮೋದಿಯವರದ್ದು ದಿವಾಳಿ ಸರ್ಕಾರ. ನರೇಗಾ ಅಡಿಯಲ್ಲಿ ₹1500 ಕೋಟಿ ರಾಜ್ಯಕ್ಕೆ ಕೊಡಲಿಲ್ಲ. ನರೇಗಾ ಹಣವನ್ನ ರಾಜ್ಯ ಸರ್ಕಾರ ಕೊಟ್ಟಿದೆ. ನೀರಾವರಿಗೆ ಎಷ್ಟು ಹಣ ಕೊಟ್ಟಿದ್ರಿ ಹೇಳಿ? ಕೃಷ್ಣ ಮೇಲ್ದಂಡೆ ನೀರಾವರಿಗೆ ರಾಜ್ಯ ಸರ್ಕಾರದಿಂದ ಹಣ ಕೊಡಲು ಹೊರಟ್ರೆ ಇನ್ನೂ 50 ವರ್ಷ ಬೇಕಾಗುತ್ತದೆ. ಕೇಂದ್ರ ಸರ್ಕಾರದಿಂದ ಆರ್ಥಿಕ ನೆರವು ಕೊಡಿ ಎಂದು ಹಲವು ಸಲ ಮೋದಿಯವರಿಗೆ ಮನವಿ ಮಾಡಿದ್ದೆನೆ ಪ್ರಯೋಜನ ಆಗಿಲ್ಲ. ಇವರೆ ಹೋಗಿ ಏರ್ ಸ್ಟ್ರೈಕ್ ಮಾಡಿದ ಹಾಗೆ ಮೋದಿಯವರು ಬಿಂಬಿಸುತ್ತಿದ್ದಾರೆ. ದೇಶದ ಯುವಕರಿಗೆ ಮೋದಿಗೆ ಉದ್ಯೋಗ ನೀಡಲು ಯೋಗ್ಯತೆ ಇಲ್ಲ. ಮೇ 23 ಸರ್ಕಾರಕ್ಕೆ ಗಡುವು ನೀಡಿದ್ದಾರೆ. ಸರ್ಕಾರ ಉಳಿಯಲ್ಲ ಎಂದು ಇಷ್ಟು ದಿನ ರಾಜ್ಯ ನಾಯಕರು ಗಡವು ಕೊಟ್ಟಿದ್ರು. ಈಗ ಮೋದಿಯವರು ಗಡವು ಕೊಟ್ಡಿದ್ದಾರೆ ಎಂದರು.

ಈಗಾಗಲೇ ರಾಜ್ಯದ ಹಾಗೂ ಕೇಂದ್ರ ನಾಯಕರು ಹಲವು ಟಿಕೆ ಟಿಪ್ಪಣಿಗಳನ್ನು ಮಾಡಿದ್ದಾರೆ. ಆ ಎಲ್ಲ ಟೀಕೆ ಟಿಪ್ಪಣಿಗಳನ್ನು ಗಮನಿಸುತ್ತಿದ್ದೇನೆ. ಇದಕ್ಕೆ ರಾಜ್ಯದ ಮತದಾರರು ಮತದಾನದ ರಿಸ್ಲಟ್ ಮೂಲಕ ಉತ್ತರ ನೀಡಲಿದ್ದಾರೆ. ಅದರಲ್ಲೂ ನಮ್ಮ ಕುಟುಂಬದ ನಿರ್ಧಾರಗಳ ಬಗ್ಗೆ ಕೆಲವರು ಆರೋಪಗಳನ್ನು ಮಾಡಿದ್ದಾರೆ. ಅದರಲ್ಲಿ ಜಗದೀಶ್ ಶೆಟ್ಟರ್ ಟೀಕೆ ತುಂಬಾ ನೋವು ತಂದಿದೆ. ಮಾಜಿ ಸಿಎಂ ಜಗದೀಶ್ ಶೆಟ್ಟ್​​​​​ರ ನನ್ನ ತಾಯಿಯನ್ನು ಎಂಎಲ್​​ಸಿ ಮಾಡಿ ಬೀಡಿ ಎಂದಿದ್ದಾರೆ ಎಂದು ಅಸಮಾದಾನ ವ್ಯಕ್ತಪಡಿಸಿದರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv