ಸಚಿವ ಪುಟ್ಟರಂಗಶೆಟ್ಟಿಗೆ ಸಿಎಂ ಕುಮಾರಸ್ವಾಮಿ ಕ್ಲಾಸ್​..!

ಬೆಂಗಳೂರು: ‘ವಿಧಾನಸೌಧದ ನಿಮ್ಮ ಕಚೇರಿ ಬಳಿ ಹಣ ಪತ್ತೆಯಾದ ಪ್ರಕರಣದಿಂದಾಗಿ ಸರ್ಕಾರಕ್ಕೆ ಮುಜುಗರವಾಗಿದೆ. ಪ್ರತಿಪಕ್ಷಗಳ ಆರೋಪಗಳಿಗೆ ಉತ್ತರ ಕೊಡೋದು ಹೇಗೆ ಅಂತಾ ಸಿಎಂ ಹೆಚ್​.ಡಿ.ಕುಮಾರಸ್ವಾಮಿ ಸಚಿವ ಪುಟ್ಟರಂಗಶೆಟ್ಟಿಯನ್ನ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ನಿನ್ನೆ ನಡೆದ ಸಂಪುಟ ಸಭೆ ಬಳಿಕ ಪುಟ್ಟರಂಗಶೆಟ್ಟಿಯನ್ನ ಪ್ರತ್ಯೇಕವಾಗಿ ಕರೆದು ಸಿಎಂ ತರಾಟೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಪ್ರಕರಣದ ಪ್ರಮುಖ ಆರೋಪಿಯಾಗಿರುವ ಮೋಹನ್​ ಅವರಂಥವ್ರನ್ನ ಯಾಕೆ ಕಚೇರಿಯ ಒಳಗೆ ಬಿಟ್ಟುಕೊಂಡಿದ್ದೀರಿ? ಈಗ ನೀವು ಇದಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ ಅಂತಾ ಹೇಳ್ತಿರಿ. ಆದ್ರೆ ಇದ್ರಿಂದ ಸರ್ಕಾರಕ್ಕೆ ಸಾಕಷ್ಟು ಮುಜುಗರ ಉಂಟಾಗಿದೆ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ. ಜನವರಿ 4ರಂದು ವಿಧಾನಸೌಧದ ವೆಸ್ಟ್ ಗೇಟ್ ಬಳಿ ₹25.76 ಲಕ್ಷ ಹಣ ಪತ್ತೆಯಾಗಿತ್ತು. ಇದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು. ಅಲ್ಲದೇ ವಿಪಕ್ಷಗಳ ಟೀಕೆಗೂ ಇದು ಕಾರಣವಾಗಿದೆ.