ಶ್ರೀಲಂಕಾ ಸರಣಿ ಸ್ಫೋಟದಲ್ಲಿ ಜೆಡಿಎಸ್​ ಕಾರ್ಯಕರ್ತರ ಸಾವಿಗೆ ಸಿಎಂ ಸಂತಾಪ

ಬೆಂಗಳೂರು: ಶ್ರೀಲಂಕಾದ ಕೊಲಂಬೋದಲ್ಲಿ ನಾಪತ್ತೆಯಾಗಿದ್ದ 7 ಜೆಡಿಎಸ್​ ಕಾರ್ಯಕರ್ತರ ಪೈಕಿ ನಾಲ್ವರು ಮೃತಪಟ್ಟಿರುವುದನ್ನ ಸಿಎಂ ಹೆಚ್​.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಅವರ ಸಾವಿಗೆ ಟ್ವಿಟರ್​ನಲ್ಲಿ ಸಂತಾಪ ಸೂಚಿಸಿದ್ದಾರೆ. ಈ ಸಂಬಂಧ ಟ್ವೀಟ್​ ಮಾಡಿರುವ ಅವರು, ‘ಕೊಲಂಬೋ ಸರಣಿ ಬಾಂಬ್ ಸ್ಫೋಟದ ಸಂದರ್ಭದಲ್ಲಿ ಕಾಣೆಯಾಗಿದ್ದ, ರಾಜ್ಯದ ಏಳು ಜನರಲ್ಲಿ ನಾಲ್ಕು ಮಂದಿ ಮೃತಪಟ್ಟಿರುವುದು ದೃಢಪಟ್ಟಿದೆ. ಇದು ಅತ್ಯಂತ ದುಃಖಕರ ಸಂಗತಿ. ಮೃತರನ್ನು ಲಕ್ಷ್ಮಣ ಗೌಡ ರಮೇಶ್, ಕೆ.ಎಂ. ಲಕ್ಷ್ಮೀನಾರಾಯಣ, ಎಂ. ರಂಗಪ್ಪ ಹಾಗೂ ಕೆ.ಜಿ. ಹನುಮಂತರಾಯಪ್ಪ ಎಂದು ಗುರುತಿಸಲಾಗಿದೆ’.

‘ಹೆಚ್.ಶಿವಕುಮಾರ್, ಎ. ಮಾರೇಗೌಡ ಹಾಗೂ ಹೆಚ್. ಪುಟ್ಟರಾಜು ಅವರು ಇನ್ನೂ ಪತ್ತೆಯಾಗಿಲ್ಲ. ಮುಖ್ಯ ಕಾರ್ಯದರ್ಶಿಗಳ ಕಚೇರಿಯು ದೆಹಲಿ ಕರ್ನಾಟಕ ಭವನ ಹಾಗೂ ಮೃತರ ಹಾಗೂ ಕಾಣೆಯಾದವರ ಕುಟುಂಬಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ. ಇವರೆಲ್ಲರೂ ಜೆಡಿಎಸ್ ನಿಷ್ಠಾವಂತ ಕಾರ್ಯಕರ್ತರಾಗಿದ್ದು ಶ್ರೀಲಂಕಾ ಪ್ರವಾಸದಲ್ಲಿದ್ದರು’. ‘ಈ ದುಃಖದ ಸಂದರ್ಭದಲ್ಲಿ ಅವರ ಕುಟುಂಬದ ಬೆಂಬಲಕ್ಕೆ ನಾವಿದ್ದು, ಭಗವಂತನು ಅವರಿಗೆ ಈ ಆಘಾತ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ’ ಅಂತಾ ಮೃತರ ಸಾವಿಗೆ ಸಿಎಂ ಸಂತಾಪ ಸೂಚಿಸಿದ್ದಾರೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv