‘ಮಂಜುನಾಥ ಸ್ವಾಮಿಯೇ ಬಿಎಸ್​ವೈಗೆ ಬುದ್ಧಿ ನೀಡಿರ್ಬೇಕು, ಅದ್ಕೇ ಒಪ್ಪಿಕೊಂಡಿದ್ದಾರೆ’

ಬೆಂಗಳೂರು: ಬಿ.ಎಸ್.​ಯಡಿಯೂರಪ್ಪ ಅವತ್ತು ನಾನು ಮಾತಾಡಿಲ್ಲ ಅಂದ್ರು, ಇವತ್ತು ಒಪ್ಪಿಕೊಂಡಿದ್ದಾರೆ. ಬಹುಶಃ ಮಂಜುನಾಥೇಶ್ವರ ಸ್ವಾಮಿಯೇ ಅವರಿಗೆ ಬುದ್ಧಿ ನೀಡಿರಬೇಕು ಅಂತಾ ಸಿಎಂ ಹೆಚ್​.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಈಗ ಹಳೇ ಸರಕು ಇಟ್ಟುಕೊಂಡು ನಾಳೆ ಚರ್ಚೆ ಮಾಡ್ತಾರಂತೆ ಮಾಡ್ಲಿ ಬಿಡಿ. ಈ ವಿಚಾರದ ಬಗ್ಗೆ ಚರ್ಚೆ ಆಗ ಬೇಕು ಅಂತಾ ನಾನೇ ಒತ್ತಾಯಿಸಿದ್ದೆ. ನನ್ನ ಪಕ್ಷಕ್ಕೆ ಬಂದು ನನ್ನನ್ನು ಉಳಿಸಿ ಎಂದು ನಾನು ಯಾವುದೇ ಬಿಜೆಪಿ ಶಾಸಕರಿಗೆ ಕೇಳಿಲ್ಲ. ನಾನು ಯಾರಿಗೂ ಅಮಿಷವೊಡ್ಡಿಲ್ಲ, ಸುಭಾಷ್ ಗುತ್ತೆದಾರ್ ನಮ್ಮ ಪಕ್ಷದಲ್ಲೇ ಇದ್ದವರು. ಹಾಗಾಗಿ ನಾನು ಅವರಿಗೆ ಹೇಳಿದ್ದು, ನೀನು ನಮ್ಮ ಪಕ್ಷದವನೇ, ನಮ್ಮ ಪಕ್ಷದಲ್ಲೇ ಇದ್ದು ಗೆದ್ದಿದ್ದರೆ ಇವತ್ತು ನೀನೇ ನಿರ್ಧಾರ ತೆಗೆದುಕೊಳ್ಳೋ ಸ್ಥಾನದಲ್ಲಿ ಇರಬಹುದಿತ್ತು. ಈಗಲೂ ನಮ್ಮ ಪಕ್ಷಕ್ಕೆ ಬಾರಪ್ಪ ಎಂದು ಸ್ನೇಹಿತನಾಗಿ ಕರೆದಿದ್ದೆ. ಯಾರ ರಾಜಕೀಯ ಭವಿಷ್ಯ ಹಾಳು ಮಾಡುವಷ್ಟು ಸ್ವಾರ್ಥಿ ನಾನಲ್ಲ ಎಂದರು.

ಇದನ್ನೂ ಓದಿ: ಬಾ ಅಣ್ಣ ನೀನು ನಮ್ಮವನು, ಮಂತ್ರಿ ಮಾಡುವೆ ಅಂತಾ ಕರೆದಿದ್ದರು ಸಿಎಂ’ ಗುತ್ತೇದಾರ್ ತಿರುಗೇಟು

 


Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv