ಮುಖ್ಯಮಂತ್ರಿಗೆ ನಿಂಬೆಹಣ್ಣು, ಮೆಣಸಿನಕಾಯಿ ಹಾರ..!

ರಾಜಸ್ಥಾನ: ನಿಂಬೆ ಹಣ್ಣು, ಮೆಣಸಿನಕಾಯಿಯನ್ನ ಸುರಿದು ಹಾರ ಮಾಡಿ, ಅದಕ್ಕೆ ದೃಷ್ಟಿ ಮಂತ್ರ ಜಪಿಸಿ ಗಂಧ, ಧೂಪದ ಹೊಗೆ ಹಿಡಿದು ಮನೆ ಮುಂದೆ ಕಟ್ಟಿರೋದನ್ನ ನೋಡಿದ್ದೇವೆ.. ವಾಹನಗಳಿಗೂ ಕಟ್ಟಲಾಗುತ್ತದೆ. ಆದ್ರೆ ಮನುಷ್ಯರಿಗೇ ಈ ರೀತಿಯಾಗಿ ಹಾರ ಹಾಕೋದನ್ನ ಎಲ್ಲಾದ್ರೂ ನೋಡಿದ್ದೀರಾ? ರಾಜಸ್ಥಾನದ ಸಿಎಂ ಅಶೋಕ್ ಗೆಲ್ಹೋಟ್​ ಕಾರ್ಯಕ್ರಮ ಒಂದ್ರಲ್ಲಿ ನಿಂಬೆಹಣ್ಣು, ಮೆಣಸಿನಕಾಯಿ ಹಾರ ಹಾಕಿಕೊಂಡು ಪೋಸ್ ನೀಡಿದ್ದಾರೆ. ಅಂದ್ಹಾಗೆ ಎನ್​ಎಸ್​ಯುಐ (ನ್ಯಾಷನಲ್ ಸ್ಟುಡೆಂಟ್​​ ಯುನಿಯನ್ ಆಫ್ ಇಂಡಿಯಾ) ಕಾರ್ಯಕ್ರಮ ಒಂದನ್ನ ಆಯೋಜನೆ ಮಾಡಿತ್ತು. ಈ ಕಾರ್ಯಕ್ರಮಕ್ಕೆ ಆಗಮಿಸಿದ ವೇಳೆ ಅಶೋಕ್ ಗೆಲ್ಹೋಟ್​ ಅವ್ರಿಗೆ ಈ ಹಾರವನ್ನ ಹಾಕಿ ಬರಮಾಡಿಕೊಳ್ಳಲಾಯಿತು. ಚಿತ್ರದಲ್ಲಿ ಎನ್​ಎಸ್​ಯುಐ ಮುಖಂಡರು ಸಿಎಂಗೆ ಸನ್ಮಾನ ಮಾಡಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿರೋದನ್ನ ಕಾಣಬಹುದಾಗಿದೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv