ಮೊಡ ಕವಿದ ವಾತಾವರಣದಿಂದ ಕೂಲ್ ಸಿಟಿಯಾದ ಬಿಸಿಲನಾಡು

ಬಾಗಲಕೋಟೆ: ರಾಜ್ಯದ ಕರಾವಳಿ ಹಾಗೂ ಮಲೆನಾಡಿನಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದ್ದರೆ, ಇತ್ತ ಉತ್ತರ ಒಳನಾಡು, ಬಿಸಿಲನಾಡು ಬಾಗಲಕೋಟೆಯಲ್ಲಿ ನಾಲ್ಕು ದಿನಗಳಿಂದ ಮೋಡ ಕವಿದ ವಾತಾವರಣವಿದೆ. ನಾಲ್ಕು ದಿನ ನಗರದ ಜನ ಸೂರ್ಯನ ದರ್ಶನವನ್ನೇ ಮಾಡಿಲ್ಲ. ರಾತ್ರಿ-ಹಗಲು ಆಗಾಗ್ಗೆ ತುಂತುರು ಮಳೆಯಾಗುತ್ತಿದೆ. ಇವತ್ತು ಕೂಡ ಮೋಡ ಕವಿದ ವಾತಾವರಣ ಮುಂದುವರೆದಿದ್ದು, ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv