ಎಷ್ಟು ಬೇಗ ಮೆಟ್ಟಿಲು ಏರುತ್ತೀರಿ ಎಂಬುವುದರಲ್ಲೇ ನಿಮ್ಮ ಆರೋಗ್ಯ ತಿಳಿಯುತ್ತೆ..!

ನಾವು ಎಷ್ಟು ವರ್ಷ ಬದುಕಿರುತ್ತೇವೆ.? ಎಲ್ಲರಿಗೂ ಇದರ ಬಗ್ಗೆ ಕುತೂಹಲವಿರುತ್ತದೆ ಆದರೆ, ಈವರೆಗೂ ಇದು ಉತ್ತರ ಸಿಗದ ಪ್ರಶ್ನೆಯಾಗಿ ಉಳಿದಿದೆ. ಭವಿಷ್ಯದ ಬಗ್ಗೆ ಯೋಚಿಸೋದು ನಿಲ್ಲಿಸಿ ಈಗ, ನಿಮ್ಮ ಆರೋಗ್ಯದ ಬಗ್ಗೆ ಗಮನ ಹರಿಸುವ ಸಮಯ ಬಂದಿದೆ.

ನೀವು ಎಷ್ಟು ಬೇಗನೇ ಮೆಟ್ಟಿಲು ಏರುತ್ತೀರಿ, ಇದರಲ್ಲೇ ನಿಮ್ಮ ಆರೋಗ್ಯದ ಗುಟ್ಟು ತಿಳಿಯುತ್ತದೆ. ಆಶ್ವರ್ಯ ಎನಿಸಿದರೂ ಇದು ಸತ್ಯ. ಉಸಿರು ಬಿಡದೇ ಒಂದೇ ಬಾರಿಗೆ ಮೆಟ್ಟಿಲು ಏರಿದರೇ ನಿಮ್ಮಲ್ಲಿ ಆರೋಗ್ಯದ ಸಮಸ್ಯೆ ಇಲ್ಲ ಎಂದು ಇತ್ತೀಚೆಗೆ ಅಧ್ಯಯನವೊಂದು ಇದನ್ನು ಬಹಿರಂಗಗೊಳಿಸಿದೆ. ಮೆಟ್ಟಿಲು ಏರುವಾಗ ಆಯಾಸವಾಗಿ ನಿಲ್ಲುವುದೂ, ಮಧ್ಯದಲ್ಲಿ ಧೀರ್ಘ ಉಸಿರು ತೆಗೆದುಕೊಳ್ಳುವುದು ಇದು ನಿಮ್ಮ ದೇಹದ ಹೃದಯರಕ್ತನಾಳ ಸೇರಿದಂತೆ ಇತರೆ ಭಾಗಗಳ ಅನಾರೋಗ್ಯವನ್ನೂ ಸೂಚಿಸುತ್ತವೆ. ಅಲ್ಲದೇ ದೇಹದಲ್ಲಿ ಅನಾರೋಗ್ಯ ಹಿನ್ನೆಲೆ ಸಾವಿನ ಮೂನ್ಸೂಚನೆಯನ್ನು ತಿಳಿಯಲು ಸಾಧ್ಯವಾಗುತ್ತದೆ ಎಂದು ಅಧ್ಯಯನ ಹೇಳುತ್ತದೆ.

ಅಧ್ಯಯನ ಏನು ಹೇಳುತ್ತದೆ..?
ಸ್ಪೇನ್​​ನ ಗಲಾಷಿಯದ ಕೊರುನಾ ವಿಶ್ವವಿದ್ಯಾಲಯದ ಆಸ್ಪತ್ರೆಯಲ್ಲಿನ ತಂಡವೊಂದರ ಮೇಲೆ ಸಂಶೋಧನಾಕಾರರು ಅಧ್ಯಯನ ನಡೆಸಿ,  ನಾಲ್ಕು ಅಂತಸ್ತಿನ ಕಟ್ಟಡದ ಮೆಟ್ಟಿಲುಗಳನ್ನು ವಿರಾಮ ತೆಗೆದುಕೊಳ್ಳದೇ, ಕೇವಲ ಒಂದೇ ನಿಮಿಷದಲ್ಲಿ ವಿರಾಮವಿಲ್ಲದೇ ಏರಬೇಕಾಗಿತ್ತು. ಈ ಅಧ್ಯಯನದಲ್ಲಿ 13,000 ಪಾಲ್ಗೊಂಡಿದ್ದರು.  ಈ ವೇಳೆ ಸಾಕಷ್ಟು ಜನರು ಮೆಟ್ಟಿಲು ಹತ್ತಲು ಹೆಣಗಾಡುತ್ತಿರುವುದು ಕಂಡುಬಂತು. ಅಧ್ಯಯನದಲ್ಲಿ ಭಾಗಿಯಾದವರು ತಮ್ಮ ಟಾಸ್ಕ್​​ ಅನ್ನು ಪೂರ್ಣಗೊಳಿಸಲು ಹೆಣಗಾಡಿದವರು ಹೃದಯ ಸಮಸ್ಯೆಯಿಂದ ಸಾವನ್ನಪ್ಪುವ ಸಾಧ್ಯತೆಗಿಂತಲೂ ಮೂರು ಪಟ್ಟು ಬೇರೆ ಕಾಯಿಲೆಯಿಂದ ಸಾವನ್ನಪ್ಪುವ ಸಾಧ್ಯತೆ ಇರುತ್ತದೆ ಎಂದು ಅಧ್ಯಯನಕಾರರು ಹೇಳಿದ್ದಾರೆ.

ಈ ಪರೀಕ್ಷೆಯಲ್ಲಿ ಸೋತವರು ಏನ್​ ಮಾಡ್ಬೇಕು..?
ಸಂಶೋಧನಾಕಾರರು ನಡೆಸಿದ ಅಧ್ಯಯನದಲ್ಲಿ ಸೋತವರಿಗೆ ವೈದ್ಯರ ತಪಾಸಣೆಯನ್ನು ಮಾಡಿಸಿ ಎಂದು ಸೂಚಿಸಿದ್ರು. ಜೊತೆಗೆ ಉತ್ತಮ ಆರೋಗ್ಯಕ್ಕಾಗಿ ವ್ಯಾಯಾಮವನ್ನು ರೂಢಿಸಿಕೊಳ್ಳಿ ಎಂದು ಸಲಹೆ ನೀಡಿದ್ರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv