ಗಾಂಧಿ ಜಯಂತಿ ಅಂಗವಾಗಿ ಪೊಲೀಸ​ರಿಂದ ಸ್ವಚ್ಛ ಭಾರತ

ಧಾರವಾಡ: ಮಹಾತ್ಮ ಗಾಂಧಿ ಜಯಂತಿ ಅಂಗವಾಗಿ ಇಂದು ಬೆಳ್ಳಂಬೆಳಗ್ಗೆ ಧಾರವಾಡ ಸಂಚಾರಿ ಠಾಣೆಯ ಪೊಲೀಸರು ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಪ್ರಧಾನಿ ನರೇಂದ್ರ ಮೋದಿಯವರ ಸ್ವಚ್ಛ ಭಾರತ ಅಭಿಯಾನದಡಿಯಲ್ಲಿ ಸ್ವಚ್ಛತಾ ಕಾರ್ಯ ನಡೆಸಿದ್ರು. ನಗರದ ಪ್ರಮುಖ ವೃತ್ತ ಹಾಗೂ ಪ್ರಮುಖ ರಸ್ತೆಗಳಲ್ಲಿ ಅಳವಡಿಸಿರುವ ಡಿವೈಡರ್​ಗಳು ಸಾಕಷ್ಟು ಧೂಳಿನಿಂದ ತುಂಬಿರುವುದರಿಂದ ಎಲ್ಲ ಪೊಲೀಸರು ನೀರಿನಿಂದ ಡಿವೈಡರ್​ಗಳನ್ನು ಸ್ವಚ್ಛಗೂಳಿಸಿದರು. ಡಿಸಿಪಿ ನ್ಯಾಮಗೌಡ ಹಾಗೂ ಸಂಚಾರಿ ಇನ್ಸ್​​ಪೆಕ್ಟರ್ ಚೆನ್ನಣ್ಣವರ ನೇತೃತ್ವದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv