ಸೀಟಿಗಾಗಿ ಅಲ್ಲಾ ‘ಸ್ವೀಟಿ’ಗಾಗಿ ನಡೀತು ಫೈಟ್​..!

ಕೊಲ್ಕತ್ತಾ:ತನ್ನ ಹುಡುಗಿ ಪಕ್ಕಾ ಕುಳಿತುಕೊಳ್ಳಲು ಸೀಟ್ ಕೊಡಲಿಲ್ಲ ಅನ್ನೋ ಕಾರಣಕ್ಕೆ ವಿದ್ಯಾರ್ಥಿಯೊಬ್ಬ ತನ್ನ ಜೂನಿಯರ್​ನನ್ನ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಕೋಲ್ಕತ್ತಾದ ಡಮ್​ ಡಮ್​ನಲ್ಲಿ ನಡೆದಿದೆ.

ಶಾಲಾ ಬಸ್​ನಲ್ಲಿ 12ನೇ ತರಗತಿಯ ವಿದ್ಯಾರ್ಥಿಯೊಬ್ಬ ತನ್ನ ಗರ್ಲ್​ಫ್ರೆಂಡ್​ ಪಕ್ಕ ಕೂರಲು ಸಜ್ಜಾಗಿದ್ದ. ಈ ವೇಳೆ ಆ ಸೀಟ್​ನಲ್ಲಿ 11ನೇ ತರಗತಿಯ ವಿದ್ಯಾರ್ಥಿ ಕುಳಿತಿದ್ದ . ಸೀಟ್​ ಬಿಟ್ಟು ಏಳುವಂತೆ ಸಿನಿಯರ್ ವಿದ್ಯಾರ್ಥಿ ಕೇಳಿದ್ದಾನೆ. ಆದ್ರೆ ಇದನ್ನು ಜೂನಿಯರ್ ವಿದ್ಯಾರ್ಥಿ ನಿರಾಕರಿಸಿದ್ದ.
ಈ ವಿಚಾರಕ್ಕೆ ಇಬ್ಬರು ವಾಗ್ವಾದಕ್ಕೆ ಇಳಿದಿದ್ದಾರೆ. ಇದು ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದೆ. ಉಳಿದ ವಿದ್ಯಾರ್ಥಿಗಳು ಜಗಳ ಬಿಡಿಸಲು ಹೋದ್ರು ಯಾವುದೇ ಪ್ರಯೋಜನವಾಗಿಲ್ಲ. ಹಲ್ಲೆಗೊಳಗಾದ ವಿದ್ಯಾರ್ಥಿ ನಡುರಸ್ತೆಯಲ್ಲಿಯೇ ಬಸ್‌ನಿಂದ ಇಳಿದರೂ ಬಿಡದೆೆ ರಸ್ತೆಯ ಪಕ್ಕದ ಅಂಗಡಿಯಲ್ಲಿದ್ದ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ.
ಸದ್ಯ ಗಾಯಾಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದುಬಂದಿದೆ. ಆದ್ರೆ ಪ್ರಕರಣ ಕುರಿತು ಇನ್ನೂ ಯಾವುದೇ ದೂರು ದಾಖಲಾಗಿಲ್ಲ ಅಂತ ಹೇಳಲಾಗಿದೆ.