ಬಿಜೆಪಿಯ ಪಾಲಿಕೆ ಸದಸ್ಯರಿಂದ ಮನೆ ಕೆಲಸಕ್ಕೆ ಪೌರ ಕಾರ್ಮಿಕ ಬಳಕೆ?

ಹುಬ್ಬಳ್ಳಿ : ಹುಬ್ಬಳ್ಳಿ – ಧಾರವಾಡ ಪಾಲಿಕೆಯ ಬಿಜೆಪಿ ಸದಸ್ಯರು ಗುತ್ತಿಗೆ ಪೌರ ಕಾರ್ಮಿಕರನ್ನು ತಮ್ಮ ಮನೆ ಕೆಲಸಗಳಿಗೆ ಬಳಸಿಕೊಳ್ಳುತ್ತಾರೆ. ಅದಲ್ಲದೇ ಮನೆಕೆಲಸ ಮಾಡದಿದ್ದರೆ ಗುತ್ತಿಗೆದಾರರ ಮೂಲಕ ಹಲ್ಲೆ ಮಾಡಿಸುತ್ತಿದ್ದಾರೆ ಎಂದು ಗುತ್ತಿಗೆ ಪೌರ ಕಾರ್ಮಿಕರು ಗಂಭೀರ ಆರೋಪ ಮಾಡಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪೌರಕಾರ್ಮಿಕ ಸಂಘದ ಅಧ್ಯಕ್ಷ ವಿಜಯ್ ಗುಂಟ್ರಾಳ್, ಮಹಾನಗರ ಪಾಲಿಕೆ ಅಧಿಕಾರದ ಚುಕ್ಕಾಣಿ ಹಿಡಿದಿರುವ ಬಿಜೆಪಿ ಸದಸ್ಯರು ಈ ರೀತಿ ಕಿರುಕುಳ ನೀಡುತ್ತಿದ್ದಾರೆ. ಪಾಲಿಕೆಯ ಸದಸ್ಯರಾದ ಶಿವಾನಂದ ಮುತ್ತಣ್ಣವರ ಮತ್ತು ವೀರಣ್ಣ ಸವಡಿ ವಿರುದ್ಧ ಆರೋಪ ಕೇಳಿಬಂದಿದೆ. ಇದಲ್ಲದೇ ಸಂಸದ ಪ್ರಹ್ಲಾದ್‌ ಜೋಶಿ ಸಹೋದರ ಗೋವಿಂದ ಜೋಶಿಯವರ ಮನೆಯಲ್ಲೂ ಕೆಲಸ ಮಾಡುವಂತೆ ಬಿಜೆಪಿ ನಾಯಕರು ಒತ್ತಡ ಹೇರುತ್ತಿದ್ದಾರೆ ಎಂದು ಗುತ್ತಿಗೆ ಪೌರ ಕಾರ್ಮಿಕರು ಆಪಾದಿಸಿದ್ದಾರೆ.
ಕಳೆದ 2009 ರಿಂದ ಕಿರುಕುಳ
ಬಿಜೆಪಿ ಮಹಾನಗರ ಪಾಲಿಕೆ ಸದಸ್ಯರು ವಾರ್ಡ್ ಬಿಟ್ಟು ಬೇರೆಡೆ ಕೆಲಸ ಮಾಡುವಂತೆ ಕಿರುಕುಳ ನೀಡುತ್ತಿದ್ದಾರೆ. ಕಳೆದ 2009 ರಿಂದ ಪಾಲಿಕೆ ಸದಸ್ಯರ ಮನೆಯಲ್ಲಿ ಕೆಲಸ ಮಾಡೋದ್ರಿಂದ ಪಾಲಿಕೆಗೆ ಅಪಾರ ನಷ್ಟ ಸಂಭವಿಸಿದೆ ಎಂದು ಮಾಧ್ಯಮದ ಮುಂದೆ ಮಹಿಳಾ ಗುತ್ತಿಗೆ ನೌಕರರು ತಮ್ಮ ಅಳಲು ತೋಡಿಕೊಂಡರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂಪರ್ಕಿಸಿ: contact@firstnews.tv