ಪೌರ ಕಾರ್ಮಿಕರಿಂದ ಪುಕ್ಕಟೆಯಾಗಿ ದುಡಿಸಿಕೊಳ್ತಿದ್ದಾರಾ ಈ ನಗರ ಸಭೆ ಅಧ್ಯಕ್ಷ..!

ಕೊಪ್ಪಳ: ನಗರಸಭೆ ಅಧ್ಯಕ್ಷನನೊಬ್ಬ ಪೌರ ಕಾರ್ಮಿಕರನ್ನು ಪುಕ್ಕಟ್ಟೆ ದುಡಿಸಿಕೊಳ್ಳುತ್ತಿರುವ ಹೇಯ ಘಟನೆ ಕೊಪ್ಪಳ ನಗರದಲ್ಲಿ ನಡೆದಿದೆ. ನಗರಸಭೆ ಅಧ್ಯಕ್ಷ ಮಹೇಂದ್ರ ಛೋಪ್ರಾ ತನ್ನ ಮನೆಯ ಆವರಣದ ಸ್ವಚ್ಚತಾ ಕೆಲಸಕ್ಕೆ ಪೌರ ಕಾರ್ಮಿಕರ ಬಳಕೆ ಮಾಡಿರುವ ಆರೋಪ ಕೇಳಿ ಬಂದಿದೆ.

ಪಟ್ಟಣದ ಬಿಟಿ ಪಾಟೀಲ್ ನಗರದಲ್ಲಿರುವ ನಗರ ಸಭೆ ಅಧ್ಯಕ್ಷನ ಮನೆಯ ಮುಂದಿನ ಆವರಣ ಕ್ಲೀನ್ ಮಾಡಲು ಪೌರ ಕಾರ್ಮಿಕರನ್ನ ಬಳಸಿಕೊಂಡಿದ್ದಾರೆ. ಅಲ್ಲದೆ ಅವರಿಗೆ ಯಾವುದೆ ಹಣ ನೀಡದೆ ಸರ್ಕಾರಿ ಸಂಬಳದಲ್ಲೆ ಮನೆಕೆಲಸ ಮಾಡಿಸಿ ಕೊಳ್ಳುತಿದ್ದಾರೆ ಎನ್ನಲಾಗ್ತಿದೆ. ಸದ್ಯ ಅಧ್ಯಕ್ಷನ ದರ್ಬಾರ್ ಬಗ್ಗೆ ಸ್ವತಃ ಪೌರಕಾರ್ಮಿಕನೇ ಬಾಯ್ಬಿಟ್ಟಿದ್ದಾನೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv