ಅದೃಷ್ಟ ಪರೀಕ್ಷೆಗಿಳಿದಿರೋ ಸಿನಿಮಾ ಸ್ಟಾರ್​​ಗಳಲ್ಲಿ ಯಾರಿಗೆ ವಿಜಯಮಾಲೆ?

ಲೋಕಸಭಾ ಚುನಾವಣೆಯ ಫಲಿತಾಂಶ ಇಂದು ಹೊರಬೀಳಲಿದ್ದು, ಮುಂದಿನ 5 ವರ್ಷ ದೇಶದಲ್ಲಿ ಅಧಿಕಾರ ನಡೆಸೋರು ಯಾರು ಅನ್ನೋ ಕುತೂಹಲಕ್ಕೆ ಇಂದು ಉತ್ತರ ಸಿಗಲಿದೆ. ದೇಶದ 543 ಕ್ಷೇತ್ರಗಳ ಪೈಕಿ 542 ಕ್ಷೇತ್ರಗಳಿಗೆ ಚುನಾವಣೆ ನಡೆದಿದೆ. ಈ ಬಾರಿ ಘಟಾನುಘಟಿಗಳು ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು. ಕ್ರೀಡಾ ಕ್ಷೇತ್ರ ಹಾಗೂ ಸಿನಿಮಾರಂಗದಿಂದ ಹಲವರು ಕಣಕ್ಕಿಳಿದಿದ್ದು, ಅವರ ರಾಜಕೀಯ ಭವಿಷ್ಯ ಏನಾಗಲಿದೆ ಅನ್ನೋ ಕುತೂಹಲವಿದೆ.

ಹೈವೋಲ್ಟೇಜ್​ ಕ್ಷೇತ್ರವಾದ ಮಂಡ್ಯದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಅಂಬರೀಶ್​​ ಕಣಕ್ಕಿಳಿದಿದ್ದು, ಅವರ ವಿರುದ್ಧ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್​ ಕುಮಾರಸ್ವಾಮಿ ಸ್ಪರ್ಧಿಸಿದ್ರು. ಇಂದು ಇವರಿಬ್ಬರಲ್ಲಿ ವಿಜಯ ಮಾಲೆ ಯಾರ ಕೊರಳಿಗೆ ಬೀಳಲಿದೆ ಅನ್ನೋ ಕುತೂಹಲ ರಾಜ್ಯದ ಜನರಿಗಿದೆ. ಒಂದೆಡೆ ಸುಮಲತಾ ಪರ ಜೋಡೆತ್ತುಗಳಾಗಿ ಪ್ರಚಾರ ಮಾಡಿದ ನಟ ದರ್ಶನ್​ ಹಾಗೂ ಯಶ್ ಮತ್ತೊಂದೆಡೆ ಮಗನ ರಾಜಕೀಯ ಭವಿಷ್ಯದ ಬಗ್ಗೆ ಚಿಂತಿಸುತ್ತಿರೋ ಸಿಎಂ ಕುಮಾರಸ್ವಾಮಿ ಇಬ್ಬರಿಗೂ ಇದು ಪ್ರತಿಷ್ಠೆಯ ಕಣವಾಗಿದೆ. ಇನ್ನು ನಟ ಪ್ರಕಾಶ್​ ರಾಜ್​​ ಕೂಡ ಈ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಬೆಂಗಳೂರು ಕೇಂದ್ರ ಕ್ಷೇತ್ರದಿಂದ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಅತ್ತ ಬಾಲಿವುಡ್​ ನಟ ಸನ್ನಿ ಡಿಯೋಲ್ ಗುರ್​ದಾಸ್​ಪುರ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಕನಸಿನ ರಾಣಿ ಹೇಮಾ ಮಾಲಿನಿ ಮಥುರಾ ಕ್ಷೇತ್ರದಲ್ಲಿ  ಹಾಗೂ ಜಯಪ್ರದಾ ರಾಮ್​​ಪುರ್​​ ಕ್ಷೇತ್ರದಲ್ಲಿ ಬಿಜೆಪಿಯಿಂದ ಕಣಕ್ಕಿಳಿದಿದ್ರು. ಇನ್ನು ಮುಂಬೈ ಉತ್ತರ ಕ್ಷೇತ್ರದಿಂದ ನಟಿ ಊರ್ಮಿಳಾ ಮಾತೋಂಡ್ಕರ್ ಕಾಂಗ್ರೆಸ್​ನಿಂದ ಕಣಕ್ಕಿಳಿದಿದ್ರು. ಇವರೆಲ್ಲರ ರಾಜಕೀಯ ಭವಿಷ್ಯ ಇಂದು ನಿರ್ಧಾರವಾಗಲಿದೆ.

Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv