ಯುವತಿ ಸಾವು ಪ್ರಕರಣ: ಸಿಐಡಿ ಎಸ್‌ಪಿ ಶರಣಪ್ಪ ನೇತೃತ್ವದಲ್ಲಿ ತನಿಖೆ

ರಾಯಚೂರು: ಇಂಜಿನಿಯರಿಂಗ್ ವಿದ್ಯಾರ್ಥಿನಿ ಮಧು ಪತ್ತಾರ ಅಸಹಜ ಸಾವು ಪ್ರಕರಣಕ್ಕೆ ಸಂಬಂಧಪಟ್ಟಂತೆ ನಿನ್ನೆಯಿಂದ ಸಿಐಡಿ ಅಧಿಕಾರಿಗಳ ತನಿಖೆ ಆರಂಭಗೊಂಡಿದೆ. ಈ ಹಿನ್ನೆಲೆಯಲ್ಲಿ ಇಂದು ರಾಯಚೂರಿಗೆ ಸಿಐಡಿ ಎಸ್ಪಿ ಶರಣಪ್ಪ ಆಗಮಿಸಿದ್ದಾರೆ. ಸಿಐಡಿ ಎಸ್‌ಪಿ ಶರಣಪ್ಪ ನೇತೃತ್ವದಲ್ಲಿ ಮಧು ಪತ್ತಾರ ಸಾವಿನ ತನಿಖೆ ನಡೆಯುತ್ತಿದೆ. ನಿನ್ನೆ ಅಷ್ಟೇ ಸಿಐಡಿ ಅಧಿಕಾರಿಗಳ ತಂಡ ಸ್ಥಳ ಪರಿಶೀಲನೆ ನಡೆಸಿದ್ರು. ಇನ್ನು ಸಿಐಡಿ ತಂಡ ರಾಯಚೂರು ಎಸ್‌ಪಿ ಕಚೇರಿಗೆ ತೆರಳಿ ಪ್ರಕರಣದ ಸಂಫೂರ್ಣ ಮಾಹಿತಿ ಪಡೆಯಲಿದೆ. ಮೃತ ಮಧು ಮನೆ, ಘಟನಾ ಸ್ಥಳ ಹಾಗೂ ನೇತಾಜಿ ನಗರ ಠಾಣೆಗೆ ಸಿಐಡಿ ತಂಡ ಭೇಟಿ ನೀಡಿ, ತನಿಖೆ ನಡೆಸಲಿದೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv