ವಿದ್ಯಾರ್ಥಿನಿ ಸಾವು: ಪ್ರಕರಣದ ಬಗ್ಗೆ ಏನೇ ಮಾಹಿತಿಯಿದ್ರೂ ತಿಳಿಸಿ -ಸಿಐಡಿ ಎಸ್ಪಿ ಡಾ. ಶರಣಪ್ಪ

ರಾಯಚೂರು: ಎಂಜಿನಿಯರಿಂಗ್ ವಿದ್ಯಾರ್ಥಿನಿ ಮಧು ಪತ್ತಾರ್​ ಸಾವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಘಟನಾ ಸ್ಥಳಕ್ಕೆ ಸಿಐಡಿ ಎಸ್‌ಪಿ ಡಾ. ಶರಣಪ್ಪ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಕೃಷಿ ವಿವಿ ಗೆಸ್ಟ್ ಹೌಸ್‌ನಿಂದ ಘಟನಾ ಸ್ಥಳಕ್ಕೆ, ರಾಯಚೂರು ಡಿವೈಎಸ್‌ಪಿ ಶೀಲವಂತ ಜೊತೆಗೆ ಸಿಐಡಿ ಎಸ್ಪಿ ಡಾ. ಶರಣಪ್ಪ ಆಗಮಿಸಿ, ಪರಿಶೀಲನೆ ನಡೆಸಿದರು. ಬಳಿಕ ಮಾತನಾಡಿದ ಡಾ. ಶರಣಪ್ಪ, ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ. ಎಲ್ಲಾ ಆಯಾಮಗಳಲ್ಲಿ ಕುಲಂಕಶವಾಗಿ ತನಿಖೆ ಮಾಡುತ್ತೇವೆ.‌ ಮಧು ಕುಟುಂಬಸ್ಥರನ್ನೂ ಭೇಟಿಯಾಗಿ ಮಾಹಿತಿ ಪಡೆಯುತ್ತೇವೆ. ಬೆಂಗಳೂರಿನಿಂದ ಎಫ್ಎಸ್‌ಎಲ್ ಟೀಂನ್ನು (Forensic Science Laboratory) ಕರೆಸಿಕೊಂಡಿದ್ದೇವೆ. ನಿನ್ನೆಯಿಂದ ಪ್ರಾಥಮಿಕವಾಗಿ ತನಿಖೆ ಆರಂಭಿಸಿದ್ದೇವೆ ಎಂದರು. ಪ್ರಕರಣದ ಬಗ್ಗೆ ಯಾರಿಗಾದ್ರು ಮಾಹಿತಿ ಇದ್ರೆ ತಿಳಿಸುವಂತೆ ಇದೇ ವೇಳೆ ಸಿಐಡಿ ಎಸ್ಪಿ ಶರಣಪ್ಪ ಮನವಿ ಮಾಡಿದರು.

Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv