ವಿಶ್ವಕಪ್​ ಬಳಿಕ ಒನ್​ ಡೇ ಕ್ರಿಕೆಟ್​ಗೆ ಗೇಲ್​ ಗುಡ್​ ಬೈ..!

ತನ್ನ ಹೊಡಿಬಡಿ ಆಟದಿಂದಲೇ ಕ್ರಿಕೆಟ್​​ ಜಗತ್ತಿನ ದಿಗ್ಗಜರ ಸಾಲಿಗೆ ಸೇರಿದ್ದ ವೆಸ್ಟ್​ಇಂಡೀಸ್​ ಆಟಗಾರ ಕ್ರಿಸ್ ಗೇಲ್​ ನಿವೃತ್ತಿಯ ಶಾಕ್​ ನೀಡಿದ್ದಾರೆ. 2019ರಲ್ಲಿ ಇಂಗ್ಲೆಂಡ್​ ಹಾಗೂ ವೇಲ್ಸ್​ನಲ್ಲಿ ನಡೆಯಲಿರುವ ವಿಶ್ವಕಪ್​ ಬಳಿಕ ನಿವೃತ್ತಿ ಘೋಷಿಸಲಿದ್ದಾರೆ. 1999ರಂದು ಭಾರತದ ವಿರುದ್ಧ ಮೊದಲ ಏಕದಿನ ಪಂದ್ಯವಾಡಿದ ಗೇಲ್​ ಈವರೆಗೆ ಒಟ್ಟು 284 ಪಂದ್ಯವಾಡಿದ್ದಾರೆ. ಇದರಲ್ಲಿ 36.98 ಸರಾಸರಿಯಲ್ಲಿ 9,727 ರನ್​ ಕಲೆಹಾಕಿದ್ದು, 23 ಶತಕ ಹಾಗೂ 49 ಅರ್ಧ ಶತಕಗಳನ್ನು ದಾಖಲಿಸಿದ್ದಾರೆ. ಇನ್ನು ಬೌಲಿಂಗ್​​ನಲ್ಲು ಕಮಾಲ್​ ಮಾಡಿರುವ ಗೇಲ್​​​ 165 ವಿಕೆಟ್​​ಗಳನ್ನೂ ಕೂಡ ಉರುಳಿಸಿದ್ದಾರೆ. ಗೇಲ್​​ ಟಿ-20, ಏಕದಿನ ಹಾಗೂ ಟೆಸ್ಟ್​ ಕ್ರಿಕೆಟ್ ಈ ಮೂರು ಆವೃತ್ತಿಯಲ್ಲಿ ಶತಕ ಬಾರಿಸಿದ ಮೊದಲ ಆಟಗಾರ ಎಂಬ ಖ್ಯಾತಿಗೆ ಪಾತ್ರರಾಗಿದ್ರು.

Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv