‘ಪ್ರಧಾನಿ ವಿರುದ್ಧ ಬೆರಳು ತೋರಿಸಿದ್ರೆ, ಕೈ ಕತ್ತರಿಸುತ್ತೇವೆ’, ಬಿಜೆಪಿ ನಾಯಕನ ಉದ್ಧಟತನ

ಹಿಮಾಚಲ ಪ್ರದೇಶ: ಕೆಟ್ಟ ಮೇಲೆ ಬುದ್ಧಿ ಬಂತು ಅಂತ ಗಾದೆ ಮಾತಿದೆ. ಆದ್ರೆ, ಕೆಲವರು ಇದಕ್ಕೆ ವಿರುದ್ಧವಾಗಿಯೇ ಇರ್ತಾರೆ. ಅದೆಷ್ಟೇ ತಪ್ಪುಗಳನ್ನ ಮಾಡಿದ್ರೂ, ಅದಕ್ಕೆ ಶಿಕ್ಷೆ ಅನುಭವಿಸಿದ್ರೂ ಅವರಿಗೆ ಬುದ್ಧಿ ಬರೋದಿಲ್ಲ ಅನಿಸುತ್ತೆ. ಸದ್ಯ ಈ ಸಾಲಿಗೆ ಹಿಮಾಚಲ ಪ್ರದೇಶದ ಬಿಜೆಪಿ ಅಧ್ಯಕ್ಷ, ಸತ್ಪಾಲ್ ಸಿಂಗ್ ಸತ್ತಿ ಕೂಡ ಸೇರುತ್ತಾರೆ.

ಇತ್ತೀಚಿಗಷ್ಟೇ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಅವಾಚ್ಯ ಶಬ್ದ ಬಳಸುವ ಮೂಲಕ ಚುನಾವಣಾ ಆಯೋಗದ ಕೆಂಗಣ್ಣಿಗೆ ಸತ್ತಿ ಗುರಿಯಾಗಿದ್ದರು. ರಾಹುಲ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕೆ ಶುಕ್ರವಾರದಂದು ಚುನಾವಣಾ ಆಯೋಗ, ಸತ್ತಿಗೆ 48 ಗಂಟೆಗಳ ಕಾಲ ಪ್ರಚಾರ ಮಾಡದಂತೆ, ಸಾರ್ವಜನಿಕ ಸಭೆಗಳಲ್ಲಿ ಮಾತನಾಡದಂತೆ ಶಿಕ್ಷೆ ವಿಧಿಸಿತ್ತು. ಇದಾಗಿ 5 ದಿನಗಳೂ ಕಳೆದಿಲ್ಲ. ಇದೀಗ ಸತ್ಪಾಲ್ ಸಿಂಗ್ ಸತ್ತಿ ಮತ್ತೊಂದು ವಿವಾದಾತ್ಮಕ, ಪ್ರಚೋದನಾತ್ಮಕ ಹೇಳಿಕೆಯನ್ನ ನೀಡಿದ್ದಾರೆ.

ಯಾರೇ ಪ್ರಧಾನಮಂತ್ರಿ ನರೇಂದ್ರ ಮೋದಿಯನ್ನ ವಿರೋಧಿಸಿದ್ರೆ, ಅವರ ಕೈ ಕತ್ತರಿಸೋದಾಗಿ ಸತ್ತಿ ಬೆದರಿಕೆ ಹಾಕಿದ್ದಾರೆ. ಯಾರಾದ್ರೂ ಪ್ರಧಾನಿ ಮೋದಿ ವಿರುದ್ಧ ಬೆರಳು ತೋರಿಸಿದ್ರೆ, ಅಂಥವರ ಕೈ ಕತ್ತರಿಸಿ ಕೈಗೆ ಕೊಡ್ತೀವಿ ಅಂತ ಸತ್ತಿ ಹೇಳಿದ್ದಾರೆ. ಇದು ಭಾರೀ ವಿವಾದಕ್ಕೆ ಕಾರಣವಾಗಿದ್ದು, ಮತ್ತೆ ಸತ್ತಿ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ಹೋಗಿದೆ.

Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv