ರಸ್ತೆ ಸುರಕ್ಷಾ ಮಾಸಾಚರಣೆಯಲ್ಲಿ ಪೊಲೀಸರ ಎಡವಟ್ಟು..

ಚಿತ್ರದುರ್ಗ: ರಸ್ತೆ ಸುರಕ್ಷಾ ಮಾಸಾಚರಣೆ ವೇಳೆ ಜಿಲ್ಲಾ ಪೊಲೀಸರೇ ಎಡವಟ್ಟು ಮಾಡಿದ್ದಾರೆ. ನಗರದ ಒನಕೆ ಓಬವ್ವ ವೃತ್ತದಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ನಿಯಮ ಮೀರಿರುವ ಪೊಲೀಸರು, ಈ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಲಗೇಜ್ ಆಟೋಗಳಲ್ಲಿ ಶಾಲಾ ವಿದ್ಯಾರ್ಥಿಗಳನ್ನು ಕರೆತಂದು ಎಡವಟ್ಟು ಮಾಡಿಕೊಂಡಿದ್ದಾರೆ. ಅಲ್ಲದೇ ಜಾಥಾ ಬಳಿಕ ಮತ್ತೆ ಅದೇ ‌ಲಗೇಜ್ ಆಟೋಗಳಲ್ಲಿ ವಿದ್ಯಾರ್ಥಿಗಳನ್ನು ಕಳಿಸಿದ್ದಾರೆ. ಇನ್ನು, ಮಾಸ ಜಾಥಾಕ್ಕೆ ಎಸ್ಪಿ ಶ್ರೀನಾಥ ಜೋಶಿ ಚಾಲನೆ ನೀಡಿದ್ರು, ಜಿಲ್ಲಾ ಎಎಸ್ಪಿ ರಾಮ್ ಅರಸಿದ್ಧಿ ಉಪಸ್ಥಿತರಿದ್ರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ:contact@firstnews.tv