‘ಬ್ಲಾಕ್​ ಬಾಕ್ಸ್​​​ನಲ್ಲಿ ಇದ್ದಿದ್ದು ಭದ್ರತೆಗೆ ಸಂಬಂಧಿಸಿದ ಉಪಕರಣ’: ಡಿಸಿ, ಎಸ್​ಪಿ ಸ್ಪಷ್ಟನೆ

ಚಿತ್ರದುರ್ಗ: ಏಪ್ರಿಲ್ 9ರಂದು ಚಿತ್ರದುರ್ಗದಲ್ಲಿ ನಡೆದ ಮೋದಿ ಸಮಾವೇಶದ ವೇಳೆ ಬ್ಲಾಕ್​ ಬಾಕ್ಸ್ ಒಂದನ್ನ ತರಾತುರಿಯಲ್ಲಿ ಸಾಗಾಟ ಮಾಡಿರುವ ವಿಡಿಯೋ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇವೆ, ಅದು ಏನು ಅನ್ನೋದರ ಬಗ್ಗೆ ಮಾಹಿತಿ ನೀಡುತ್ತೇವೆ ಅಂತಾ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

ಕಪ್ಪು ಪೆಟ್ಟಿಗೆ ಸಾಗಣೆ ಸಂಬಂಧ ನಗರದಲ್ಲಿ ಜಿಲ್ಲಾ ಚುನಾವಣಾಧಿಕಾರಿ (ಡಿಸಿ) ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳು ಜಂಟಿ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ವಿನೋಥ್ ಪ್ರಿಯಾ, ವಿಡಿಯೋ ವೈರಲ್ ಆಗಿರುವ ಬಗ್ಗೆ ವಿಚಾರಣೆ ಮಾಡಿದ್ದೇವೆ, ವಿಡಿಯೋ ಕೂಡಾ ನೋಡಿದ್ದೇವೆ ಎಂದರು.

ಇದನ್ನೂ ಓದಿ: ಮೋದಿ ಹೆಲಿಕಾಪ್ಟರ್​​ನಿಂದ ಸೀಕ್ರೆಟ್​​ ಬಾಕ್ಸ್​ ಸಾಗಣೆ: ಕಪ್ಪುಪೆಟ್ಟಿಗೆ ಬಗ್ಗೆ ಕಾಂಗ್ರೆಸ್​​ ಅನುಮಾನ

ಹೆಲಿಕಾಪ್ಟರ್​​ನಲ್ಲಿ ಬಂದವರೇ ಕಾರಿನಲ್ಲಿ ಬಾಕ್ಸ್​​ ಇಟ್ಟಿರೋದು. ಇದು ಭದ್ರತೆಗೆ ಸಂಬಂಧಿಸಿದ ಬಾಕ್ಸ್ ಎಂದು ನಮಗೆ ತಿಳಿದು ಬಂದಿದೆ. ಎಲ್ಲಾ ವಾಹನ ಚೆಕ್ ಮಾಡಲು ನಾವು ಹೇಳಿದ್ದೇವೆ. ಹೆಲಿಕಾಪ್ಟರ್ ಚೆಕ್ ಮಾಡಲು ಎಸ್​ಪಿಜಿ ಅನುಮತಿ ಕೊಟ್ಟಿರಲಿಲ್ಲ. ಇನೋವಾ ಕಾರಿನಲ್ಲಿ ಏನಿದೆ ಎಂದು ನಾವು ನೋಡಿಲ್ಲ. ಈಗ, ಇನೋವಾ ಕಾರನ್ನ ಕೂಡಾ ನಮ್ಮ ಸಿಬ್ಬಂದಿ ತಪಾಸಣೆ ಮಾಡಿದ್ದಾರೆ. ಕಾರಿನ ಡ್ರೈವರ್ ಅವರನ್ನೂ ವಿಚಾರಣೆ ಮಾಡಿದ್ದೇವೆ. ಒಟ್ಟು 11 ಡಿವಿ ವಾಹನಕ್ಕೆ ಅನುಮತಿ ನೀಡಿಲಾಗಿತ್ತು. ಪ್ರಧಾನಿ ಭದ್ರತೆ ಕುರಿತ ಸಾಮಗ್ರಿಗಳು ಮಾತ್ರ ಅದರಲ್ಲಿತ್ತು ಎಂದು ತಿಳಿದು ಬಂದಿದೆ. ಆದರೆ ಆ ಬಾಕ್ಸ್​ನಲ್ಲಿ ಏನಿದೆ ಎಂದು ತಿಳಿದಿಲ್ಲ. ಚಿತ್ರದುರ್ಗದಿಂದ ಮೈಸೂರಿಗೆ ಬಾಕ್ಸ್​​ ಹೋಗಿದೆ ಎಂದರು.  ಹೆಲಿಕಾಪ್ಟರ್ ತಪಾಸಣೆಗೆ ನಮಗೆ ಅನುಮತಿ ಇಲ್ಲ. ಹೆಲಿಕಾಪ್ಟರ್ ತಪಾಸಣೆ ಮಾಡಲು ಹೇಳಿದ್ದೇವೆ. ಆದರೆ ಎಸ್​​ಪಿಜಿ ಅವರು ಹೆಲಿಕಾಪ್ಟರ್ ತಪಾಸಣೆಗೆ ಅವಕಾಶ ನೀಡಿಲ್ಲ. ಈ ಬಗ್ಗೆ ಪರಿಶೀಲನೆ ನಡೆಸಿ ತಿಳಿಸುತ್ತೇವೆ ಎಂದು ಹೇಳಿದ್ರು.

ಇದನ್ನೂ ಓದಿ: ಮೋದಿ ಸಮಾವೇಶದಲ್ಲಿ ಸಾಗಿಸಿದ ‘ಬ್ಲಾಕ್​ ಪೆಟ್ಟಿಗೆ’ ವಿರುದ್ಧ ಇಸಿಗೆ ದೂರು: ಕಾಂಗ್ರೆಸ್


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv