ಹತ್ತು ವರ್ಷದ ಸಂಭ್ರಮದಲ್ಲಿ ‘ಚಿತ್ತಾರ’..!

ಚಿತ್ತಾರ.. ಸ್ಯಾಂಡಲ್​ವುಡ್​ನ ಪ್ರತಿಷ್ಠಿತ ಸಿನಿಮಾ ಮ್ಯಾಗಜಿನ್​. ಸಿನಿಮಾಗೆ ಅಂತಲೇ ಯಾವುದೇ ಮ್ಯಾಗಜಿನ್​ ಕನ್ನಡದಲ್ಲಿ ಇರಲಿಲ್ಲ. ಇಂತಹ ಸಮಯದಲ್ಲಿ ‘ಚಿತ್ತಾರ’ ಕೊರತೆಯನ್ನು ಯಶಸ್ವಿಯಾಗಿ ನಿಭಾಯಿಸಿತ್ತು. 2009ರಲ್ಲಿ ಆರಂಭವಾದ ‘ಚಿತ್ತಾರ’ದ ಜರ್ನಿ, ಈಗ ದಶಕ ತಲುಪಿದೆ. ಈ ಸಂಭ್ರಮವನ್ನು ಚಿತ್ತಾರ ಅಂಡ್​ ಟೀಂ ಅದ್ಧೂರಿಯಾಗಿ ಆಚರಿಸುತ್ತಿದೆ.

ಪ್ರಚಾರದಲ್ಲೂ ಮುಂದು..!
ಚಿತ್ತಾರ ಜನಸಾಮಾನ್ಯರಿಗೂ ಇಷ್ಟವಾಗಲು ಪ್ರಮುಖ ಕಾರಣ ಗುಣಮಟ್ಟ. ಅತ್ಯುತ್ತಮ ಗುಣಮಟ್ಟದಿಂದ ಬಹುಬೇಗನೆ ಜನರ ಚಿತ್ತ ಸೆಳೆದಿತ್ತು. ಆರಂಭವಾದ ಕೆಲದಿನಗಳಲ್ಲೇ ಮಾರುಕಟ್ಟೆಯಲ್ಲಿ ಭರವಸೆ ಹುಟ್ಟಿಸಿತ್ತು. ಗುಣಮಟ್ಟ ಹಾಳೆ, ವಿಶೇಷ ಅಂಕಣ, ಆಕರ್ಷಕ ಫೋಟೊಗಳಿಂದ ಜನಮನ್ನಣೆ ಗಳಿಸಿತ್ತು. ಆನಂತರದಲ್ಲಿ ಜಾಕಿ, ಗಜಕೇಸರಿ, ಐರಾವತ, ರಣವಿಕ್ರಮ, ವಿಲನ್​, ಕೆಜಿಎಫ್​… ಹೀಗೆ 30ಕ್ಕೂ ಹೆಚ್ಚು ಸಿನಿಮಾಗಳಿಗೆ ಮ್ಯಾಗಜಿನ್​ ಪಾರ್ಟ್‌ನರ್‌ ಆಗಿಯೂ ಮಿಂಚು ಹರಿಸಿತ್ತು. ಇದರಿಂದ ಸಿನಿಮಾ ಪ್ರಚಾರದಕ್ಕೂ ಒಂದೆಜ್ಜೆ ಮುಂದೆ ಹೋಗಿ ‘ಚಿತ್ತಾರ’ ಯಶಸ್ಸು ಗಳಿಸಿತ್ತು. ಈಗ ದಶಕದ ಸಂಭ್ರಮದಲ್ಲಿರೊ ‘ಚಿತ್ತಾರ’ ತಂಡ ಅದ್ಧೂರಿ ಸಮಾರಂಭ ಏರ್ಪಡಿಸಿದ್ದು, ಇದೇ 28ರಂದು ಸಿನಿಮಂದಿಗೆ ‘ಚಿತ್ತಾರ ಸ್ಟೈಲ್​ ಅವಾರ್ಡ್ಸ್​’ ನೀಡಿ ಗೌರವಿಸುತ್ತಿದೆ.