ಇಬ್ಬರು ರೈತರ ಮೇಲೆ ಏಕಾಏಕಿ ಚಿರತೆ ದಾಳಿ..!

ತುಮಕೂರು: ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತರ ಮೇಲೆ ಚಿರತೆ ದಾಳಿ ನಡೆಸಿದ ಘಟನೆ ಮಧುಗಿರಿ ತಾಲೂಕಿನ ಮಲ್ಲನೇಹಳ್ಳಿಯಲ್ಲಿ ಇಂದು ಬೆಳಗ್ಗೆ ನಡೆದಿದೆ. ಚಿರತೆ ದಾಳಿಯಿಂದಾಗಿ ಇಬ್ಬರು ರೈತರು ಗಂಭೀರ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಚಿರತೆ ದಾಳಿಗೊಳಗಾದ ರೈತರನ್ನು ಕರಿಯಣ್ಣ (55), ಶಿವಣ್ಣ(49) ಎಂದು ಗುರುತಿಸಲಾಗಿದೆ. ಮುಂಜಾನೆ ಜಮೀನಿಗೆ ಹೋಗಿ ಕೆಲಸ ಮಾಡುವ ವೇಳೆ ಚಿರತೆ ದಾಳಿ ನಡೆಸಿದೆ. ಇಂದು ಬೆಳಗ್ಗೆ 8 ಗಂಟೆಗೆ ಚಿರತೆ ದಾಳಿ ನಡೆಸಿದೆ ಅಂತಾ ಗ್ರಾಮಸ್ಥರು ಹೇಳಿದರು.
ಈ ಭಾಗದಲ್ಲಿ ಸುಮಾರು 100-150ಕ್ಕೂ ಹೆಚ್ಚು ಕುರಿಗಳನ್ನು ಚಿರತೆ ತಿಂದಿದೆ. ಇದರ ಕುರಿತಾಗಿ ಅರಣ್ಯಾಧಿಕಾರಿಗಳಿಗೆ ಮನವಿ ಮಾಡಿಕೊಂಡರು ಯಾವುದೇ ಪ್ರಯೋಜನವಾಗಿಲ್ಲ. ಈಗ ಮನುಷ್ಯರ ಮೇಲೂ ಚಿರತೆ ದಾಳಿ ಮಾಡ್ತಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂಪರ್ಕಿಸಿ: contact@firstnews.tv